ಕುಂಬಳಚೇರಿ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಿಂದ ಹಸಿರುವಾಣಿ ಮೆರವಣಿಗೆ

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆಯುವ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಹಸಿರುವಾಣಿ ಮೆರವಣಿಗೆಯೊಂದಿಗೆ ಆರಂಭ ದೊರೆಯಿತು.


ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಪ್ರಾರ್ಥಿಸಿದ ಬಳಿಕ ಪೂರ್ಣಕುಂಭ ,ಕೇರಳದ ಚೆಂಡೆ ವಾದನದೊಂದಿಗೆ ಮೆರವಣಿಗೆ ನಡೆಯಿತು.ನೂರಾರು ಮಂದಿ ಭಾಗವಹಿಸಿದ್ದರು.

ಹಸಿರುವಾಣಿ ಮೆರವಣಿಗೆಯೊಂದಿಗೆ ದೈವಂಕಟ್ಟು ಮಹೋತ್ಸವ ಆರಂಭಗೊಂಡಿದ್ದು, ಧಾರ್ಮಿಕ ಸಭೆ ನಡೆಯಲಿದೆ.

ರಾತ್ರಿ 8.30ಕ್ಕೆ ದೈವಗಳ ಕೂಡುವಿಕೆ, ರಾತ್ರಿ 2 ರಿಂದ ನಡೆಯುವ ಶ್ರೀ ಪೊಟ್ಟನ್ ದೈವದ ನಡಾವಳಿಯೊಂದಿಗೆ ಎರಡು ದಿನಗಳ ಕಾಲ ಹಲವಾರು ದೈವಗಳ ನಡಾವಳಿಗಳು ನಿರಂತರವಾಗಿ ನಡೆಯಲಿದೆ.