ಜೆಸಿಐ ಸುಳ್ಯ ಸಿಟಿ ಮತ್ತು ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ

0


ವಿನುತ ಪಾತಿಕಲ್ಲುರವರಿಗೆ ಜೇಸಿ ಮೌನ ಸಾಧಕಿ ಪ್ರಶಸ್ತಿ

ಜೇಸಿಐ ಸುಳ್ಯ ಸಿಟಿ ಹಾಗೂ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಾಗೂ ವಿನುತ ಪಾತಿಕಲ್ಲುರವರಿಗೆ ಜೇಸಿ ಮೌನ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಜೇಸಿ ಸುಳ್ಯ ಸಿಟಿ ಅಧ್ಯಕ್ಷ ರಂಜಿತ್ ಪಿ ಜೆ ಅಧ್ಯಕ್ಷತೆಯನ್ನು ವಹಿಸಿದ್ದರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಜೇಸಿ ಸದಸ್ಯೆ ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಶಿಕ್ಷಕಿ ಕಾವ್ಯ, ಧರ್ಮಸ್ಥಳ ಗ್ರಾಮಭಿವೃದ್ದಿ ಸೇವಾ ನಿರತೆ ಸೌಮ್ಯ, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್, ನಿರ್ದೇಶಕರಾದ ಸಿದ್ದೀಕ್ ಕೊಕ್ಕೊ, ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆಯ ವಿನಯರಾಜ್ ಮೊದಲಾದವರು ಉಪಸ್ಥಿತರಿದ್ದರು. ಜೇಸಿಐ ಕಿರ್ತನ್ ಸ್ವಾಗತಿಸಿದರು.