ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯೊಂದಿಗೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರ ಸಭೆ

0

ಅಡ್ತಲೆ ರಸ್ತೆ : ಮಾ.31 ರೊಳಗೆ ಆರಂಭಿಸುವ ಭರವಸೆ ಹಿನ್ನಲೆ

ನೋಟ ಅಭಿಯಾನ ಮುಂದೂಡಲು ನಿರ್ಧಾರ : ಹರಿಪ್ರಸಾದ್ ಅಡ್ತಲೆ

ಅರಂತೋಡು -ಅಡ್ತಲೆ – ಎಲಿಮಲೆ ರಸ್ತೆ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವ ಅಡ್ತಲೆಯ ಹಿತರಕ್ಷಣಾ ವೇದಿಕೆ ಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿ ವಾರದೊಳಗೆ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ವಾರ್ಡ್ ವ್ಯಾಪ್ತಿಯಲ್ಲಿ ನೋಟ ಅಭಿಯಾನದ ಹೇಳಿಕೆ ನೀಡಿದ ಬೆನ್ನಲ್ಲೆ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿಯವರು ನಾಗರಿಕಾ ಹಿತರಕ್ಷಣಾ ವೇದಿಕೆಯವರ ಜತೆ ಸಭೆ ನಡೆಸಿ ಮಾ.೩೧ರೊಳಗೆ ಕಾಮಗಾರಿ ಆರಮಭಿಸುವುದಾಗಿ ಭರವಸೆ ನೀಡಿರುವ ಮೇರೆಗೆ ನಾಗರಿಕ ಹಿತರಕ್ಷಣಾ ವೇದಿಕೆ ನಡೆಸಲುzಶಿಸಿರುವ ನೋಟ ಅಭಿಯಾನವನ್ನು ತಾತ್ಕಾಲಿಕವಾಗಿ ಮುಂದೂಡಿರುವುದಾಗಿ ತಿಳಿದು ಬಂದಿದೆ.


ಅರಂತೋಡು – ಅಡ್ತಲೆ -ಎಲಿಮಲೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯವರು ಹೋರಾಟ ನಡೆಸುತ್ತಿರುವ ಪರಿಣಾಮ ಇತ್ತೀಚೆಗೆ ಸಚಿವರ ಮೂಲಕ ಸರಕಾರದಿಂದ ರೂ.೧ ಕೋಟಿ ಅನುದಾನ ಬಂದು ೧೩೫೭ ಮೀಟರ್ ರಸ್ತೆ ಅಭಿವೃದ್ಧಿಯಾಗಿತ್ತು. ಆದರೆ ಆ ರಸ್ತೆ ಅಭಿವೃದ್ಧಿಗೆ ೩ ಕೋಟಿ ರೂ ಅನುದಾನ ಇದೆ ಎಂದು ಸಚಿವರು ಹಾಗೂ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರು ಹೇಳಿದ್ದರು. ಅದರಂತೆ ಸರಕಾರದಿಂದ ೨ ಕೋಟಿ ಅನುದಾನ ಬಳಿಕ ಬಿಡುಗಡೆಯೂ ಗೊಂಡಿತ್ತು. ಆದರೆ ಕಾಮಗಾರಿ ಮಾತ್ರ ನಡೆದಿರಲಿಲ್ಲ.


ಅಡ್ತಲೆ ವರೆಗೆ ರಸ್ತೆ ಆಗಲೇ ಬೇಕೆಂಬ ಬೇಡಿಕೆಯನ್ನು ಗಟ್ಟಿಯಾಗಿ ಹಿಡಿದಿರುವ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯವರು ಕಳೆದ ವಾರ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಹೋರಾಟದ ವಿಚಾರವನ್ನು ಮುಂದಿಟ್ಟರಲ್ಲದೆ ಚುನಾವಣೆಯ ಮೊದಲು ಅಡ್ತಲೆ ವರೆಗೆ ರಸ್ತೆ ಅಭಿವೃದ್ಧಿ ಆಗಬೇಕು. ಈ ಕೆಲಸ ವಾರದೊಳಗೆ ಆರಂಭವಾಗದಿದ್ದರೆ ನಾವು ವಾರ್ಡ್ ವ್ಯಾಪ್ತಿಯಲ್ಲಿ ನೋಟ ಅಭಿಯಾನ ಆರಂಭಿಸುತ್ತೇವೆ. ರಸ್ತೆ ಅಭಿವೃದ್ಧಿ ಆಗುವ ವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದ್ದರು.


ಅಡ್ತಲೆಯಲ್ಲಿ ಸಭೆ : ಮಾ.೭ರಂದು ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ಕೇಶವ ಅಡ್ತಲೆಯವರ ಮನೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿಯವರಿದ್ದು ನಾಗರಿಕ ಹಿತರಕ್ಷಣಾ ವೇದಿಕೆಯವರೊಂದಿಗೆ ಮಾತು ಕತೆ ನಡೆಯಿತು. ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮೊದಲಾದವರು ಇದ್ದರು.
ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ, ಪ್ರಮುಖರಾದ ಭವಾನಿಶಂಕರ ಅಡ್ತಲೆ, ಮೋಹಿತ್ ಮೇಲಡ್ತಲೆ, ರಂಜಿತ್ ಅಡ್ತಲೆ, ಶಶಿಕುಮಾರ್ ಅಡ್ತಲೆ, ಗಣೇಶ್ ಅಡ್ತಲೆ, ಓಂಪ್ರಸಾದ್, ಮೋಹನ್ ಅಡ್ತಲೆ ಸೇರಿ ಸುಮಾರು ೨೦ ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.


ಸಭೆಯಲ್ಲಿ ಹರೀಶ್ ಕಂಜಿಪಿಲಿಯವರು ಅಡ್ತಲೆ ರಸ್ತೆ ಕಾಮಗಾರಿ ಆಗದಿರುವುದಕ್ಕೆ ನಾಗರಿಕ ಹಿತರಕ್ಷಣಾ ವೇದಿಕೆಯವರ ಅಸಮಾಧಾನಗೊಂಡಿರುವ ವಿಚಾರ ಹೇಳಿದರಲ್ಲದೆ, ಸರಕಾರದಿಂದ ೨ ಕೋಟಿ ಬಿಡುಗಡೆ ಗೊಂಡಿದ್ದು ಟೆಂಡರ್ ಹಂತದಲ್ಲದೆ ಮಾ.೩೧ರೊಳಗೆ ನಾವು ರಸ್ತೆ ಕಾಮಗಾರಿ ಆರಂಭಿಸುತ್ತೇವೆ. ತಾವು ನೋಟ ಅಭಿಯಾನ ಮಾಡದಂತೆ ಸಭೆಯಲ್ಲಿ ಕೇಳಿಕೊಂಡರೆನ್ನಲಾಗಿದೆ.


ಈ ವೇಳೆ ತಮ್ಮ ಅಹವಾಲು ಮುಂದಿಟ್ಟ ಹರಿಪ್ರಸಾದ್ ಅಡ್ತಲೆ ಹಾಗೂ ಭವಾನಿಶಂಕರ ಅಡ್ತಲೆಯವರು ರಸ್ತೆಗಾಗಿ ತಾವು ನಡೆಸಿದ ಹೋರಾಟವನ್ನು ವಿವರಿಸಿದರಲ್ಲದೆ, ಗುದ್ದಲಿಪೂಜೆ ನಡೆಸಿದ ದಿನ ತಾವು ೧ ಕೋಟಿ ಅನುದಾನದ ಜತೆಗೆ ೨ ಕೋಟಿ ಅನುದಾನವನ್ನು ಕೂಡಾ ಜತೆಗೆ ಕಾಮಗಾರಿ ನಡೆಸುವ ಭರವಸೆ ನೀಡಿದ್ದೀರಿ. ಆದರೆ ಈಗ ಒಮದು ಕೋಟಿಯ ಕೆಲಸ ಮಾತ್ರ ಆಗಿದೆ. ಚುನಾವಣೆಯ ಮುಂಚಿತವಾಗಿ ಅಡ್ತಲೆ ವರೆಗೆ ರಸ್ತೆ ಆಗಲೇ ಬೇಕು. ಆಗದಿದ್ದರೆ ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ” ಎಂದು ಹೇಳಿದರೆಲ್ಲನಾಗಿದೆ. ಕೆಲ ಸಮಯ ಸಭೆಯಲ್ಲಿ ಚರ್ಚೆ ನಡೆಯಿತೆಂದು ತಿಳಿದು ಬಂದಿದೆ.

ಈ ಕುರಿತು ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ನಾಗರಿಕಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದರು, “ಅಡ್ತಲೆ ರಸ್ತೆ ಕಾಮಗಾರಿ ವಾರದೊಳಗೆ ಆರಂಭಿಸದಿದ್ದರೆ ನೋಟ ಅಭಿಯಾನ ನಡೆಸುವುದಾಗಿ ಹೇಳಿದ್ದೆವು. ಮೊನ್ನೆ ಮಂಡಲ ಸಮಿತಿ ಅಧ್ಯಕ್ಷರು ನಮ್ಮ ನ್ನು ಕರೆಸಿ ಮಾ.೩೧ರೊಳಗೆ ರಸ್ತೆ ಕಾಮಗಾರಿ ಆರಂಭಿಸುವ ಭರವಸೆ ನೀಡಿರುವುದರಿಂದ ನಮ್ಮ ಅಭಿಯಾನವನ್ನು ಮುಂದೂಡುತ್ತೇವೆ. ಮಾ.೩೧ರೊಳಗೆ ಕಾಮಗಾರಿ ಆರಂಭಿಸದಿದ್ದರೆ ಮತ್ತೆ ವೇದಿಕೆ ಸಭೆ ಮನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.