ಪೆರಾಜೆ : ಸಾಗುವಾನಿ ಮರದ ದಿಮ್ಮಿಗಳ ಪತ್ತೆ

0

ಅರಣ್ಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯವರು ಭೇಟಿ

ಜಮಾಯಿಸಿದ ಸಾರ್ವಜನಿಕರು

  

ರಸ್ತೆ ವಿಷಯಕ್ಕೆ ಸಂಬಂಧಿಸಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆಂದು ಆಗಮಿಸಿದ ಪೊಲೀಸರಿಗೆ ಮನೆಯ ಆವರಣದಲ್ಲಿ ಸಾಗುವಾನಿ ಮರದ ದಿಮ್ಮಿ ಹಾಗೂ ಬೀಟಿ ಮರದ ದಿಮ್ಮಿ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯವರು ಭೇಟಿ ನೀಡಿದ ಹಾಗೂ ಸಾರ್ವಜನಿಕರು ಜಮಾಯಿಸಿದ ಘಟನೆ ವರದಿಯಾಗಿದೆ.

ಪೆರಾಜೆ ಹುಳಿಯ ಸೇತುವೆ ಬಳಿ ರಸ್ತೆ ವಿಷಯಕ್ಕೆ ಸಂಬಂಧಿಸಿ ಕಳೆದ ಎರಡು ದಿನಗಳಿಂದ ಸ್ಥಳೀಯ ಊರಿನ ದೇವಸ್ಥಾನದ ಮುಖಂಡರಿಗೂ ಮತ್ತು ಸ್ಥಳೀಯ ನಿವಾಸಿ ಮೊಹಿದೀನ್  (ಮುಹೀದಿ) ಎಂಬುವವರಿಗೆ ರಸ್ತೆ ವಿಷಯದಲ್ಲಿ ಕಿರಿಕಿರಿ ಉಂಟಾಗಿತ್ತು.


ಮೋಹಿದಿನ್ ರವರ ಮನೆಯ      ಜಾಗದ ಬಳಿ ದೇವಸ್ಥಾನಕ್ಕೆ ಸಂಬಂಧಿಸಿದ  ಮಾರಿಕಳ ಕಾರ್ಯಕ್ರಮ ನಡೆಸುವ ಸ್ಥಳಕ್ಕೆ ತೆರಳುವ ರಸ್ತೆಯನ್ನು ಮೊಯಿದಿನ್ ರವರು ಬೇಲಿ ಹಾಕಿ ಬಂದ್ ಮಾಡಿದ್ದರು ಎನ್ನಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿ ಸಂಪಾಜೆ ಪೊಲೀಸ್ ಠಾಣೆಯಲ್ಲಿ  ಪರಸ್ಪರ ದೂರು ದಾಖಲಾಗಿದ್ದು, ಈ ಘಟನೆ ನಡೆದ ಸ್ಥಳವನ್ನು ಪರಿಶೀಲನೆಗೆಂದು  ಇಂದು ಸಂಜೆ ಸಂಪಾಜೆ ಪೋಲಿಸ್ ಠಾಣೆಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಬಂದಿದ್ದರು.

ಈ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ    ಮೋಯಿದೀನ್ ರವರ ಜಾಗದಲ್ಲಿ ಸಾಗುವಾನಿ ಮರದ ದಿಮ್ಮಿ, ಬೀಟಿ ಮರದ ದಿಮ್ಮಿ ಶೇಖರಣೆ ಮಾಡಿ ಇಟ್ಟಿರುವ ಘಟನೆಯ ಬೆಳಕಿಗೆ ಬಂದಿದ್ದು,  ರಸ್ತೆ ವಿಚಾರದಲ್ಲಿ ತಪಾಸಣೆಗೆ ಬಂದಿದ್ದ ಸಂಪಾಜೆ ಪೊಲೀಸರು ಮರಗಳನ್ನು ಪರಿಶೀಲನೆ ಮಾಡಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ಈ ಘಟನೆಯ ವಿಚಾರ ಹಬ್ಬುತ್ತಿದ್ದಂತೆ  ಪೆರಾಜೆ ಸಮೀಪದ ಸುಮಾರು ನೂರಕ್ಕೂ ಹೆಚ್ಚು ಸ್ಥಳೀಯ ಜನರು  ಘಟನಾ ಸ್ಥಳದಲ್ಲಿ ಜಮಾಯಿಸಿ ಮರ ಶೇಖರಣೆ ಮಾಡಿ ಇಟ್ಟಿರುವ ಮೋಯ್ದಿನ್ ರವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ  ಅರಣ್ಯ ಅಧಿಕಾರಿಗಳು ಇಲ್ಲಿ ಏನು ಘಟನೆ ನಡೆದಿದೆಯೋ ಅದನ್ನು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಸಂಪಾಜೆ ಪೊಲೀಸ್ ಠಾಣೆಯಿಂದ ಎ ಎಸ್ ಐ ಶ್ರೀನಿವಾಸ್, ಸಿಬ್ಬಂದಿಗಳಾದ ಕರಬಸಪ್ಪ ಚಕ್ರ ಸಾಲಿ, ಜಯಣ್ಣ ಇದ್ದರು.

ವಿಜಯೇಂದ್ರ ಡಿ ಆರ್ ಎಫ್ ಓ, ಗಸ್ತು ಅರಣ್ಯ ವೀಕ್ಷಕ ನಾಗರಾಜ್, ಪುರುಷೋತ್ತಮ್ ಅರಣ್ಯ ವೀಕ್ಷಕರಾದ, ಚಿನ್ನಪ್ಪ, ವಸಂತ,, ವಾಹನ ಚಾಲಕರಾದ ಭರತ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಬಳಿಕ ಘಟನಾ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಾಗುತ್ತಿದ್ದಂತೆ ಸ್ಥಳದಲ್ಲಿದ್ದ ತಾಲೂಕು ಪಂಚಾಯತಿ ಸದಸ್ಯ ನಾಗೇಶ್ ಕುಂದಲಪಾಡಿಯವರು ಸಾರ್ವಜನಿಕರನ್ನು ಸಮಾಧಾನಪಡಿಸಿ ಸ್ಥಳದಿಂದ ಕಳುಹಿಸಿದರು.