ಅರಂಬೂರು ಬದರ್ ಜುಮಾ ಮಸ್ಜಿದ್ ನಲ್ಲಿ ಇಫ್ತಾರ್ ಸಂಗಮ

0

ಪವಿತ್ರ ರಂಜಾನ್ ತಿಂಗಳ ಅಂಗವಾಗಿ ಅರಂಬೂರು ಬದ್ರ್ ಜುಮಾ ಮಸ್ಜಿದ್ ನಲ್ಲಿ ಇಫ್ತಾರ್ ಸಂಗಮ ಕಾರ್ಯಕ್ರಮ ಏಪ್ರಿಲ್ 12ರಂದು ನಡೆಯಿತು.


ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಎಸ್ ಸಂಸುದ್ದೀನ್ ಹಾಗೂ ಅವರ ಫ್ಯಾಮಿಲಿ ವತಿಯಿಂದ ಇಫ್ತಾರ್ ಆಯೋಜಿಸಲಾಗಿತ್ತು.ಸ್ಥಳೀಯ ಮಸೀದಿ ಆಡಳಿತ ಕಮಿಟಿಯ ಅಧ್ಯಕ್ಷ ಹಾಜಿ ಎಸ್ ಭಾಷಾ ಸಾಹೇಬ್, ಗೌರವ ಅಧ್ಯಕ್ಷರಾದ ಅಬ್ದುಲ್ ರಹಮಾನ್, ಗಾಂಧಿನಗರ ಜುಮಾ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಹಾಜಿ ಮುಸ್ತಫ ಜನತಾ, ಸುಳ್ಯ ಅಲ್ಪಸಂಖ್ಯಾತರ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ನಗರ ಪಂಚಾಯತಿ ಸದಸ್ಯ ಶರೀಫ್ ಕಂಠಿ, ಮುಖಂಡರಾದ ಸಿದ್ದಿಕ್ ಕೊಕ್ಕೋ, ಕೆ ಬಿ ಇಬ್ರಾಹಿಂ, ಬಶೀರ್ ಸಪ್ನಾ, ಸ್ಥಳೀಯರಾದ ಅಕ್ಬರ್ ಕರಾವಳಿ, ಮಸೀದಿಯ ಕಾರ್ಯದರ್ಶಿ ಕಲಂದರ್ ಮೊದಲಾದವರು ಉಪಸ್ಥಿತರಿದ್ದರು.

ಇಫ್ತಾರ್ ಕೂಟದಲ್ಲಿ ನೂರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ರಂಜಾನ್ ತಿಂಗಳ ಒಂದನೇ ತಾರೀಖಿನಿಂದ ಆರಂಭಗೊಂಡ ಇಫ್ತಾರ್ ಕೂಟ ರಂಜಾನ್ ಮೂವತ್ತರವರೆಗೆ ಧಾನಿಗಳ ಸಹಕಾರದಿಂದ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.