ಕಾಯರ್ತೋಡಿ: ಸೂರ್ತಿಲ ರಕ್ತೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವ ಭಾವಿ ಸಭೆ

0

ಸುಳ್ಯ ಕಾಯರ್ತೋಡಿ ವಿಷ್ಣು ನಗರ ಸೂರ್ತಿಲ ಶ್ರೀ ರಕ್ತೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವ ಭಾವಿ ಸಭೆಯು ಸಮಿತಿಯ ಅಧ್ಯಕ್ಷ ಡಾ.ಲೀಲಾಧರ ಡಿ.ವಿ.ಯವರ ಅಧ್ಯಕ್ಷತೆಯಲ್ಲಿ ಎ.13 ರಂದು ಸೂರ್ತಿಲ ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು.


ಮೂರು ವರ್ಷಗಳ ಹಿಂದೆ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು ಬ್ರಹ್ಮಕಲಶೋತ್ಸವದ ದಿನ ನಿಗದಿ ಪಡಿಸಿದಂತೆ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿರುವ ಬಗ್ಗೆ ವಿವರವನ್ನು ಪ್ರಾಸ್ತಾವಿಕ ಮಾತಿನೊಂದಿಗೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ತಿಳಿಸಿದರು.


ಮುಂದಿನ ತಿಂಗಳ ಮೇ.21,22 ರಂದು ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಗುಳಿಗ ದೈವದ ನೇಮೋತ್ಸವ ಕಾರ್ಯದ ರೂಪು ರೇಷೆಗಳ ವಿವರ ನೀಡಿದರು. ಉತ್ಸವದ ಉಪ ಸಮಿತಿಗಳ ಜವಬ್ದಾರಿ ಹಂಚಿಕೆಯ ವಿವರ ತಿಳಿಸಿದರು.


ಈ ಸಂದರ್ಭದಲ್ಲಿ
ಕಾರ್ಯಕ್ರಮದ ಯಶಸ್ವಿಗೆ ಸರ್ವರ ಸಹಕಾರವನ್ನು ಅಧ್ಯಕ್ಷ ಡಾ.ಲೀಲಾಧರ ಡಿ.ವಿ. ಯವರು ಯಾಚಿಸಿದರು.

ವೇದಿಕೆಯಲ್ಲಿ ಸಮಿತಿ ಗೌರವಾಧ್ಯಕ್ಷ ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಗೌರವ ಸಲಹೆಗಾರರಾದ ಎನ್.ಎ.ರಾಮಚಂದ್ರ, ಜಯಪ್ರಕಾಶ್ ರೈ ಸುಳ್ಯ, ಸಮಿತಿ ಖಜಾಂಜಿ ಗಣೇಶ್ ಆಳ್ವ ಸುಳ್ಯ, ಸಮಿತಿ ಪ್ರಧಾನ ಕಾರ್ಯದರ್ಶಿ
ಹರೀಶ್ ರೈ ಉಬರಡ್ಕ, ಸೇವಾ ಸಮಿತಿ ಅಧ್ಯಕ್ಷ ಶಶಿಧರ ರೈ ಪಡ್ಪು, ಜೀ.ಸ ಪ್ರಧಾನ ಕಾರ್ಯದರ್ಶಿ ಎ.ಟಿ.ಕುಸುಮಾಧರ ಕಾಯರ್ತೋಡಿ, ಸೇ. ಸಮಿತಿ ಖಜಾಂಜಿ ಕೃಷ್ಣ ಬೆಟ್ಟ ಕಾಯರ್ತೋಡಿ, ಸೇವಾ ಸಮಿತಿ ಕಾರ್ಯದರ್ಶಿ ಜಯರಾಮ ಸೂರ್ತಿಲ ಉಪಸ್ಥಿತರಿದ್ದರು. ಗಣೇಶ್ ಆಳ್ವ ಆಮಂತ್ರಣ ಪತ್ರಿಕೆಯ ಕಾರ್ಯಕ್ರಮದ ವಿವರ ತಿಳಿಸಿದರು.


ಸೇರಿದ ಭಕ್ತಾದಿಗಳು ಬ್ರಹ್ಮಕಲಶೋತ್ಸವದ ಕಾರ್ಯಕ್ಕೆ ದೇಣಿಗೆ ನೀಡಿ ಸಹಕರಿಸಿದರು.

ಶ್ರೀಮತಿ ಲೀಲಾವತಿ ಶೆಟ್ಟಿ ಪ್ರಾರ್ಥಿಸಿದರು. ಶಶಿಧರ ರೈ ಕಾಯರ್ತೋಡಿ ಸ್ವಾಗತಿಸಿದರು. ಬೂಡು ರಾಧಾಕೃಷ್ಣ ರೈ ವಂದಿಸಿದರು. ಜೀ.ಸ. ಕೋಶಾಧಿಕಾರಿ ದೇವಿಪ್ರಸಾದ್ ಕಾಯರ್ತೋಡಿ ಕಾರ್ಯಕ್ರಮ ನಿರೂಪಿಸಿದರು.

ಸೇವಾ ಸಮಿತಿ ಸದಸ್ಯರು,
ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಮಹಿಳಾ ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.