ಇನ್ನೂ ತಾಯಿಯ ಸೇರದ ಮರಿಯಾನೆ – ತುದಿಯಡ್ಕ‌ ಕಾಡಂಚಿನಲ್ಲೇ ಕೂಗಾಡುತ್ತಿದೆ

0

ಅಜ್ಜಾವರದ ತುದಿಯಡ್ಕದಲ್ಲಿ ತೋಟದ ಕೆರೆಗೆ ಬಿದ್ದು ನರಳಾಡಿ ಬಳಿಕ ಊರವರ – ಅರಣ್ಯ ಇಲಾಖಾ ಸಿಬ್ಬಂದಿಗಳ ಪ್ರಯತ್ನದಿಂದ ಕೆರೆಯಿಂದ ಮೇಲೆ ಬಂದಿದ್ದ ನಾಲ್ಕು ಕಾಡಾನೆಗಳ ಪೈಕಿ ಮೂರು‌ ಕಾಡಾನೆ ಕಾಡು ಸೇರಿಕೊಂಡಿದ್ದರೆ, ಮರಿಯಾನೆಯೊಂದು ಇನ್ನೂ‌ ಕಾಡಂಚಿನಲ್ಲಿ ಕೂಗುತ್ತಿದೆ.‌ ಇನ್ನೂ ಆ ಮರಿಯಾನೆ ತಾಯಿಯ‌ ಮಡಿಲು ಸೇರಿಲ್ಲ.

ಬೆಳಗ್ಗೆ ಆಪರೇಷನ್ ಎಲಿಫೆಂಟ್ ಯಶಸ್ವಿಯಾಗಿತ್ತು.‌ಆದರೆ ಮರಿಯಾನೆಯನ್ನು ಮೇಲಕ್ಕೆತ್ತಲು ತುಂಬಾ ಕಷ್ಟವಾಗಿ, ಊರವರು ಹಾಗೂ ಇಲಾಖೆಯವರು ಕೆರೆಗೆ ಇಳಿದು ಮೇಲಕ್ಕತ್ತಿಸಿದರು.‌ ಬಳಿಕ ಅದನ್ನು ಕಾಡಂಚಿಗೆ ಬಿಟ್ಟು ಬಂದಿದ್ದರು.


ಆದರೆ ಆನೆಗಳು ಈ‌ ಮರಿಯಾನೆಯನ್ನು ನೋಡಿವೆಯಾದರೂ ಇನ್ನೂ ಅದು ತನ್ನ ಗುಂಪಿಗೆ ಸೇರಿಸಿಕೊಂಡಿಲ್ಲ. ಸಂಜೆ ಮತ್ತೆ ಊರವರು ಮರಿಯಾನೆಯನ್ನು ಆನೆಗಳ ಗುಂಪು ಇರುವಲ್ಲಿ ವರೆಗೆ ಕೊಂಡೊಯ್ದು‌ ಬಿಟ್ಟು ಬಂದರು‌ ಆನೆಗಳು‌ ಸೇರಿಸಿಕೊಂಡಿಲ್ಲ.

ಮರಿಯಾನೆ ಮತ್ತೆ ಇಳಿದು‌ ಕಾಡಿನ‌ ಬದಿಗೆ ಬಂದು‌ ಕೂಗಾಡುತ್ತಿದೆ ಎಂದು ಊರವರು ತಿಳಿಸಿದ್ದಾರೆ.
ಕಾಡಿನ ಒಳಗೆ ಇರುವ ಕಾಡಾನೆಗಳ ಹಿಂಡು‌ ಘೀಳಿಡುವ ಶಬ್ದ ಕೇಳುತ್ತಿದೆ ಎಂದು ತಿಳಿದು ಬಂದಿದೆ.