ಸುಳ್ಯದ ರಥಬೀದಿಯಲ್ಲಿ ಲಕ್ಷ್ಮೀ ಅಟೋಮೊಬೈಲ್ಸ್ ಶುಭಾರಂಭ

0

ಸುಳ್ಯದ ರಥಬೀದಿಯಲ್ಲಿರುವ ಶ್ರೀಮತಿ ರೇವತಿ ಪ್ರಭುರವರ ಮಾಲಕತ್ವದ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಅಜಿತ್ ಕುಮಾರ್ ಎ.ಎಲ್ ರವರ ಮಾಲಕತ್ವದ ಲಕ್ಷ್ಮೀ ಅಟೋಮೊಬೈಲ್ಸ್
ಮೇ4ರಂದುಶುಭಾರಂಭಗೊಂಡಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ರವರು ದೀಪ ಪ್ರಜ್ವಲಿಸಿ ನೂತನ ಸಂಸ್ಥೆ ಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ , ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ದುರ್ಗಾ ಕಾಂಪ್ಲೆಕ್ಸ್ ಮಾಲಕಿ ಶ್ರೀಮತಿ ರೇವತಿ ಪ್ರಭು,ಉದ್ಯಮಿ ರಾಜೇಶ್ ನಾಯಕ್ ರವರು ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಲಕರ ತಾಯಿ ‌ಶ್ರೀಮತಿ ಜಯಲಕ್ಷ್ಮಿ ಅಂಜಿಕ್ಕಾರ್,
ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಉಮೇಶ್ ಪ್ರಭು, ನವನೀತ್ ಎಂಟರ್ ಪ್ರೈಸಸ್ ಮಾಲಕ ಕೇಶವ ನಾಯಕ್ ಸುಳ್ಯ, ಆಲೆಟ್ಟಿ ಸೊಸೈಟಿ ನಿರ್ದೇಶಕ ಸೂರ್ಯನಾರಾಯಣ ನಾಯಕ್ ಅಂಜಿಕ್ಕಾರ್, ಗ್ಯಾರೇಜ್ ಮಾಲಕರ ಸಂಘದ ಕಾರ್ಯದರ್ಶಿ ಜನಾರ್ದನ ದೋಳ, ಯುವ ಉದ್ಯಮಿ ಚಿದಾನಂದ ವಿದ್ಯಾನಗರ, ಮಯೂರಿ ರೆಸ್ಟೋರೆಂಟ್ ಮಾಲಕ ವಿಜಯ್ ಮಯೂರಿ, ಮನೋಹರ ಬೊಳ್ಳೂರು, ಶರತ್ ಪರಿವಾರಕಾನ, ಗುರುರಾಜ್ ಭಟ್ ಎಲಿಕ್ಕಳ,
ಸತೀಶ್ ಕುಲಾಲ್ ಆಲೆಟ್ಟಿ,ಧನಂಜಯ ಪರಿವಾರಕಾನ, ವಸಂತ್ ಪರಿವಾರಕಾನ, ಲತೀಫ್ ಹರ್ಲಡ್ಕ, ಶಿವಪ್ರಸಾದ್ ಎಂ.ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮತಿ ಕ್ಷಮಾ ಮತ್ತು ಅಜಿತ್ ಕುಮಾರ್ ಎ.ಎಲ್ ರವರು ಸರ್ವರನ್ನೂ ಸ್ವಾಗತಿಸಿದರು. ಚಿದಾನಂದ ವಿದ್ಯಾನಗರ ಕಾರ್ಯಕ್ರಮ ನಿರೂಪಿಸಿದರು.
ಚತುಷ್ಚಕ್ರ ವಾಹನಗಳಾದ ಜೀಪು,ಕಾರು,ಪಿಕ್ ಅಪ್,ಬೊಲೆರೋ ಮುಂತಾದ ವಾಹನಗಳ ಎಲ್ಲಾ ತರದ ಸ್ಪೇರ್ ಪಾರ್ಟ್ಸ್ ಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.