ಅರಂತೋಡು ಮದರಸ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0

ಕೆ.ಎಂ ಇಬ್ರಾಹಿಂ ಕುಕ್ಕುಂಬಳರವರ ಧರ್ಮಪತ್ನಿ ಮರ್ ಹೂಮ್ ಖತೀಜಮ್ಮರವರ ಸ್ಮರಣಾರ್ಥ ವರ್ಷಂಪ್ರತಿ ನೀಡುವ ಮದರಸ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭವು ಮೇ 18 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಜಮಾ ಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ದುವಾವನ್ನು ಸದರ್ ಬಹು| ಅಫ್ರಿದ್ ಮಕ್ದೂಮಿ ನೆರವೇರಿಸಿದರು. ಪುಸ್ತಕಗಳನ್ನು ಮದರಸ ಸಂಚಾಲಕರಾದ ಅಮೀರ್ ಕುಕ್ಕುಂಬಳ ವಿಧ್ಯಾರ್ಥಿಗಳಿಗೆ ವಿತರಿಸಿದರು.


ಕಾರ್ಯಕ್ರಮದಲ್ಲಿ ಸಹಾಯಕ ಅಧ್ಯಾಪಕ ಬಹು| ಶಾಫಿ ಮುಸ್ಲಿಯಾರ್ ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್ ಆಡಳಿತ ಮಂಡಳಿಯ ನಿರ್ದೇಶಕರಾದ ಅಬ್ದುಲ್ ಖಾದರ್ ಪಠೇಲ್, ಬದುರುದ್ದೀನ್ ಪಠೇಲ್, ಸಂಶುದ್ದೀನ್ ಪೆಲ್ತಡ್ಕ, ಕೆ.ಎಂ ಮೊಯಿದು ಕುಕ್ಕುಂಬಳ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಂ ಅಬ್ದುಲ್ ಮಜೀದ್ , ಕಾರ್ಯದರ್ಶಿ ಪಸೀಲು, ಕೆ.ಎಸ್. ಇಬ್ರಾಹಿಂ ಕುಕ್ಕುಂಬಳ ಬಿಳಿಯಾರ್, ಎಸ್. ಮೊಯಿದು ಕುಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಜಮಾ ಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್ ಸ್ವಾಗತಿಸಿ ನಿರೂಪಿಸಿದರು.