ಮೇ 25 : ಕುಕ್ಕಟ್ಟೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ

0

ಮುರುಳಿ ಗ್ರಾಮದ ಉಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಮೇ 25 ರಂದು ಪ್ರತಿಷ್ಠಾವರ್ಧಂತಿ ಉತ್ಸವವು ಮೂಡಬಿದಿರೆ ವೇದಮೂರ್ತಿ ಎನ್. ಕೇಶವ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವುದು.
ಮೇ 24 ರಂದು ಬೆಳಿಗ್ಗೆ ಹೊರೆ ಕಾಣಿಕೆ ಸಮರ್ಪಣೆ, ಸಂಜೆ 6:೦೦ ಗಂಟೆಗೆ ವಾಸ್ತು, ರಾಕ್ಷೋಘ್ನ, ನವಗ್ರಹ ಹೋಮ ವಾಸ್ತು ಬಲಿ, ದಿಗ್ಬಲಿ ಕಾರ್ಯಕ್ರಮ, ಮೇ 25 ರಂದು ಬೆಳಿಗ್ಗೆ ಗುರು ಗಣಪತಿ ಪೂಜೆ, ನಾಗಾಭಿಷೇಕ, ಬಳಿಕ ದೇವರಿಗೆ ನವಕ ಕಲಹೋಮ, ಅಭಿಷೇಕ, ಪ್ರಸನ್ನ ಪೂಜೆ, ದೇವರ ಪ್ರೀತ್ಯರ್ಥವಾಗಿ ಭದ್ರಕಾಳಿ ಹೋಮ, ಮಧ್ಯಾಹ್ನ ಪೂಜೆ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು.
ಅದೇ ದಿನ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಣ್ಮೂರು ಸೀತಾ ರಾಮಾಂಜನೇಯ ಭಾರತಿ ಕುಣಿತ ಭಜನಾ ಮಂಡಳಿ ಮತ್ತು ಕಡಬ ಶ್ರೀರಾಮ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ಮಂಡಳಿ ಸಬಳೂರು ರವರಿಂದ ಕುಣಿತ ಭಜನಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.
(ವರದಿ: ಎಎಸ್‌ಎಸ್ ಅಲೆಕ್ಕಾಡಿ)

LEAVE A REPLY

Please enter your comment!
Please enter your name here