ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಶಾಸಕಿ ಭಾಗಿರಥಿ ಮುರುಳ್ಯ ಭೇಟಿ

0

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ದೇವಳದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ, ಪ್ರಸ್ತುತ ಶಾಸಕಿ ಭಾಗೀರಥಿ ಮುರುಳ್ಯದವರು ಶಾಸಕರಾದ ಮೇಲೆ ಮೊಟ್ಟಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.


ದೇವಳದ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯರು ಪ್ರಸಾದ ನೀಡಿದರು.
ಈ ಸಂದರ್ಭದಲ್ಲಿ ಮುರುಳ್ಯಗ್ರಾಮ ಪಂಚಾಯಿತಿ ಅಧ್ಯಕ್ಷೆ ಕು. ಜಾನಕಿ ಮುರುಳ್ಯ, ದೇವಳದ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ರೂಪರಾಜ ರೈ ಕೆ., ಯೋಗಾನಂದ ಉಳ್ಳೇಲಾಡಿ, ಹಾಗೂ ಗೋಪಾಲ ಪೂಜಾರಿ ಮಣಿಪಾಲ ದಂಪತಿಗಳು, ಮುರುಳ್ಯ ಹಾಲು ಸೊಸೈಟಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಊರುಸಾಗು, ಭಕ್ತಾದಿಗಳು ಉಪಸ್ಥಿತರಿದ್ದರು.


ಕೇರ್ಪಡದ ವಿಶೇಷ ಪಾವಿತ್ರ್ಯತೆ ಇರುವ ತೀರ್ಥಬಾವಿಯ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದ್ದು, ಅದನ್ನು ವೀಕ್ಷಿಸಿದರು.