ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರಕಾರ ರಚನೆ-ಅಧಿಕಾರ ಸ್ವೀಕಾರ : ಪಂಜದಲ್ಲಿ ಸಂಭ್ರಮಾಚರಣೆ

0

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಸಾಧಿಸಿ ಮೇ.20 ರಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹಾಗೂ ಬೇರೆ ಸಚಿವ ಸ್ಥಾನಗಳಿಗೆ
ಅಧಿಕಾರ ಸ್ವೀಕರಿಸಿದ್ದು
ಪಂಜದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ
ನಡೆಸಿದರು.


ಸ್ಥಳದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಯನ್ನು ಕೂಗಿ ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಿದರು.
ಪಕ್ಷದ ಮುಖಂಡ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ ಮಾತನಾಡಿ ” ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ವನ್ನು ಮತದಾರರು ಬಹಳಷ್ಟು ಉತ್ತಮ ರೀತಿಯಿಂದ ಅಧಿಕಾರಕ್ಕೆ ತಂದಿದ್ದಾರೆ.ಮುಂದೆ ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರ ಬರಲಿದೆ” ಎಂದು ಅವರು ಹೇಳಿದರು. ಡಾ.ಪ್ರಕಾಶ್ ಡಿ.ಸೋಜ ಮಾತನಾಡಿದರು.


ಪಕ್ಷದ ಕಾರ್ಯಕರ್ತರಾದ
ನಾರಾಯಣ ನಾಯ್ಕ ಪಂಜ, ಗಂಗಾಧರ ಗೌಡ ಗುಂಡಡ್ಕ,
ಲಕ್ಷ್ಮಣ ಗೌಡ ಬೊಳ್ಳಾಜೆ, ದಿನೇಶ್ ಪುಂಡಿಮನೆ , ಶ್ರೀಮತಿ ದಿವ್ಯ ಪುಂಡಿಮನೆ, ಮಹಮ್ಮದ್ ನೇಮನಕಜೆ ,ಮಥಾಯಸ್ ಡಿ.ಸೋಜ, ಕುಸುಮಾಧರ ಕೆರೆಯಡ್ಕ, ಲೋಕನಾಥ ಕೆ.ಬಿ, ರಾಮಚಂದ್ರ ಕೆ, ಧರ್ಮಪಾಲ ಕಂಡೂರು,ಗಂಗಾಧರ ಆಚಾರ್ಯ ಕಲ್ಕ, ಅಭಿಷೇಕ್ ಪಳಂಗಾಯ, ಗಣಪಯ್ಯ ಕರಿಮಜಲು,ಸುಲೈಮಾನ್ ತೋಟದಮಜಲು , ಸೆಲಿನಾ ಪುಂಡುಕಾಯರ, ಮಹಮ್ಮದ್ ಕೆ.ಹೆಚ್, ಇಬ್ರಾಹಿಂ ಪೊಳೆಂಜ, ಅದ್ರಂ, ಬೆಳ್ಳಪ್ಪ ಗೌಡ ಕೋಡಿ, ವಸಂತ ಕೋಡಿ, ಗುಡ್ಡಪ್ಪ ಚೆಕ್ಕಡ್ಕ,ಕುಶಾಲಪ್ಪ ಆಡ್ಡತೋಡು, ಕೃಷ್ಣಪ್ಪ ಪಾಂಡಿಗದ್ದೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಿನ್ನಪ್ಪ ಸಂಕಡ್ಕ ಸ್ವಾಗತಿಸಿದರು . ಜಯರಾಮ ಕಂಬಳ ವಂದಿಸಿದರು.