ಪರವೂರ ಸುಳ್ಯದವರ ಸುದ್ದಿ

0

ಲೇಖನ ಬೆಂಗಳೂರು ಝೀ ಕನ್ನಡ ವಾಹಿನಿಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ‘ ಶೋಗೆ ಆಯ್ಕೆ


ಝೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಬೆಂಗಳೂರಿನ 6 ವರ್ಷದ ಪುಟಾಣಿ ಲೇಖನ ಆಯ್ಕೆಗೊಂಡಿದ್ದಾರೆ.
ಮೇ.11 ರಂದು ಬೆಂಗಳೂರಿನಲ್ಲಿ ನಡೆದ ಆಡಿಶನ್‌ನಲ್ಲಿ ಭಾಗವಹಿಸಿ ಅಂತಿಮ ಸುತ್ತಿನಲ್ಲಿ ಆಯ್ಕೆಯಾಗಿದ್ದಾಳೆ.


ಈಕೆ ಪ್ರಸ್ತುತ ಬೆಂಗಳೂರಿನಲ್ಲಿ ಎಸ್.ಎಸ್.ಫ್ಯಾಶನ್ ನಡೆಸುತ್ತಿರುವ ಸುಭಾಶ್ ಹಾಗೂ ಮಂಜುಶ್ರೀ ದಂಪತಿಯ ಪುತ್ರಿ.
ಸುಳ್ಯದ ಶಾಂತಿನಗರ ನಿವಾಸಿ, ಶ್ರೀರಾಮ ಭಜನಾ ಮಂದಿರದಲ್ಲಿ ಪುರೋಹಿತರಾಗಿ ಕೆಲಸ ನಿರ್ವಹಿಸುತ್ತಿದ್ದ ದಿ.ಪಿ.ಎಚ್.ರಾಮಕೃಷ್ಣ ರಾವ್ ರವರ ಮೊಮ್ಮಗಳು. ಲೇಖನ ಬೆಂಗಳೂರಿನ ಏಕ್ಸ್ ಮ್ಯಾಗ್ನೋಲಿಯಾ ಮಾರುತಿ ಪಬ್ಲಿಕ್ ಸ್ಕೂಲ್‌ನಲ್ಕಿ 1ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಪ್ರತಿ ಶನಿವಾರ ಹಾಗೂ ಭಾನುವಾರ 7.30 ರಿಂದ ಈ ಕಾರ್ಯಕ್ರಮ ಝೀ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.