ಸೂರ್ತಿಲ ಶ್ರೀ ರಕ್ತೇಶ್ವರಿ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೋತ್ಸವ ಹಿನ್ನೆಲೆ

0

ಸುಳ್ಯ ನಗರದಲ್ಲಿ ಸಾಗಿದ ವೈಭವದ ಹಸಿರುವಾಣಿ ಮೆರವಣಿಗೆ

ಸುಳ್ಯ ನಗರದ ಕಾಯರ್ತೋಡಿ ವಿಷ್ಣುನಗರದ ಸೂರ್ತಿಲದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಕ್ತೇಶ್ವರಿ, ಗುಳಿಗ ಮತ್ತು ನಾಗದೇವರ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ದೈವಗಳ ನೇಮೋತ್ಸವದ ಪ್ರಯುಕ್ತ ಮೇ.21ರಂದು ಬೆಳಿಗ್ಗೆ ಹಸಿರುವಾಣಿ ಸಮರ್ಪಣೆ ಮಾಡಲಾಯಿತು.
ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಿಂದ ಹೊರಟ ಹಸಿರುವಾಣಿ ಮೆರವಣಿಗೆಗೆ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು.


ಬಳಿಕ ಸುಳ್ಯ ನಗರದಲ್ಲಿ ಸಾಗಿದ ಹಸಿರುವಾಣಿ ಮೆರವಣಿಗೆಯು ಜಟ್ಟಿಪಳ್ಳ ಮೂಲಕ ಸೂರ್ತಿಲ ದೈವಸ್ಥಾನದ ಸನ್ನಿಧಿಗೆ ಬಂದು ಸಮರ್ಪಣೆಗೊಂಡಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿ ಎ.ಟಿ. ಕುಸುಮಾಧರ, ಸಹ ಕಾರ್ಯದರ್ಶಿ ಸುದರ್ಶನ್ ಜೋಷಿ, ಕೋಶಾಧಿಕಾರಿ ದೇವಿಪ್ರಸಾದ್ ಪ್ರಭು, ಉಪಾಧ್ಯಕ್ಷರುಗಳಾದ ಪುರುಷೋತ್ತಮ ಕಿರ್ಲಾಯ, ನವೀನ ಕಜೆ, ಶ್ರೀಮತಿ ಶ್ರುತಿ ಮಂಜುನಾಥ, ಸದಸ್ಯರುಗಳಾದ ಈಶ್ವರ ಭಟ್, ಚಿದಾನಂದ ಕುದ್ಪಾಜೆ, ಸಾಗರ್ ರೈ, ರವಿಪ್ರಕಾಶ್ ಸಿ.ಪಿ., ಶ್ರೀಮತಿ ಲತಾ ರಾಧಾಕೃಷ್ಣ, ಶ್ರೀಮತಿ ಲೀಲಾವತಿ ಜೆ. ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಅಧ್ಯಕ್ಷ ಡಾ. ಲೀಲಾಧರ್ ಡಿ.ವಿ., ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಉಬರಡ್ಕ, ಕಾರ್ಯದರ್ಶಿ ಚಂದ್ರಶೇಖರ ಅಡ್ಪಂಗಾಯ, ಕೋಶಾಧಿಕಾರಿ ಗಣೇಶ್ ಆಳ್ವ, ಗೌರವ ಸಲಹೆಗಾರರುಗಳಾದ ಡಾ. ಹರಪ್ರಸಾದ್ ತುದಿಯಡ್ಕ, ಉಮೇಶ್ ಪಿ.ಕೆ., ಎನ್.ಎ. ರಾಮಚಂದ್ರ ,ಜಯಪ್ರಕಾಶ್ ರೈ, ಎನ್.ಎ. ರಾಮಚಂದ್ರ, ಎಂ. ವೆಂಕಪ್ಪ ಗೌಡ, ಯನ್. ಜನಾರ್ದನ ಗೌಡ, ಉಪಾಧ್ಯಕ್ಷರುಗಳಾದ ನಾಗೇಶ್ , ಕೃಪಾಶಂಕರ ತುದಿಯಡ್ಕ, ಗೋಪಾಲಕೃಷ್ಣ ಬೋರ್ಕರ್ ಕರೋಡಿ, ಡಾ. ಡಿ.ಎಸ್. ಶೇಷಪ್ಪ, ರಾಧಾಕೃಷ್ಣ ರೈ ಬೂಡು, ವಿಠಲ ಬಾಣೂರು, ಕೆ. ಗೋಕುಲ್ ದಾಸ್, ಸದಾನಂದ ಮೂಲೆಮಜಲು, ಸ್ವಾಗತ ಸಮಿತಿಯ ವಿನಯಕುಮಾರ್ ಕಂದಡ್ಕ, ಸೇರಿದಂತೆ ಪದಾಧಿಕಾರಿಗಳು, ಮಹಿಳಾ ಸಮಿತಿಯ ಅದ್ಯಕ್ಷೆ ಶ್ರೀಮತಿ ಜಯಕೃಷ್ಣ ಬೆಟ್ಟ, ಕಾರ್ಯದರ್ಶಿ ಶ್ರೀಮತಿ ಸೌಮ್ಯ ಬಳ್ಳಡ್ಕ ಸೇರಿದಂತೆ ಮಹಿಳಾ ಸಮಿತಿಯ ಪದಾಧಿಕಾರಿಗಳು,
ಸೇವಾ ಸಮಿತಿಯ ಅಧ್ಯಕ್ಷ ಶಶಿಧರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯರಾಮ ಸೂರ್ತಿಲ, ಸಹ ಕಾರ್ಯದರ್ಶಿಗಳಾದ ಮಂಜುನಾಥ ಪ್ರಭು, ದೇವಿಪ್ರಸಾದ್, ಕೋಶಾಧಿಕಾರಿ ಕೃಷ್ಣ ಬೆಟ್ಟ ಕಾಯರ್ತೋಡಿ, ಉಪಾಧ್ಯಕ್ಷರುಗಳಾದ ಡಿ‌.ಎಸ್. ಗಿರೀಶ್, ತೀರ್ಥರಾಮ ಕೆ.ಜಿ., ಸದಸ್ಯರುಗಳಾದ ಪರಮೇಶ್ವರ ಬಿ.ಕೆ., ರಘುನಾಥ ರೈ ಕೆ, ದಿನೇಶ್ ಬಳ್ಳಡ್ಕ, ಆನಂದ ನಡುಮುಟ್ಲು, ಶ್ರೀಮತಿ ಪ್ರವಿತಾ ಪ್ರಶಾಂತ್,ಹಸಿರುವಾಣಿ ಸಮಿತಿಯ ಸಂಚಾಲಕ ಸಾಗರ್ ರೈ ಕಾಯರ್ತೋಡಿ, ಸಹಸಂಚಾಲಕ ಕಿಶೋರ್ ಆಚಾರ್ಯ ಸೇರಿದಂತೆ ಪದಾಧಿಕಾರಿಗಳು ಸೇರಿದಂತೆ ಬ್ರಹ್ಮಕಲಶ ಸಮಿತಿಯ ವಿವಿಧ ಉಪಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.