ಅಜ್ಜಾವರ ಗ್ರಾಂ.ಪಂ. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

0

ಅಜ್ಜಾವರ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಇದರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮೇ. 22 ರಿಂದ ಮೇ.26 ರ ತನಕ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ ಗೊಂಡಿತು .

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನಪಾದೆ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗ್ರಾಮದ ಪುಟಾಣಿ ಶ್ರೀಜಿತ್ ಕರ್ಲಪ್ಪಾಡಿ ಹಾಗೂ ಪ್ರಣೀತ್ ನಾರಲು ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಜಯಮಾಲ ಎ.ಕೆ ಪ್ರಾಸ್ತವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಲೀಲಾ ಮನಮೋಹನ್, ಸದಸ್ಯರುಗಳಾದ , ರವಿರಾಜ್ ಕರ್ಲಪ್ಪಾಡಿ,ರಾಹುಲ್ ಅಡ್ಪಂಗಾಯ , ಶ್ವೇತ, ಅಬ್ದುಲ್ಲಾ , ತರಬೇತುದಾರರದ ವಿಮಾಲಾರುಣ ಪಡ್ಡಂಬೈಲು ಗ್ರಂಥಾಲಯಪಾಲಕಿ ಲಕ್ಷ್ಮಿ ಮೇನಾಲ ಉಪಸ್ಥಿತರಿದ್ದರು. ಗ್ರಂಥಾಲಯ ಪಾಲಕಿ ಲಕ್ಷ್ಮಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು. ತರಬೇತಿದಾರರು ನಿರಂತರ ಐದು ದಿನಗಳ ಕಾಲ ಮಕ್ಕಳಿಗೆ ತರಬೇತಿ ನಡೆಯಲಿದೆ