ಅರಂತೋಡು : ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

0


ಅರಂತೋಡು ಗ್ರಾಮ ಪಂಚಾಯತಿನಲ್ಲಿ ಬೇಸಿಗೆ ಶಿಬಿರ ಕಾರ್ಯಕ್ರಮವು ಅರಂತೋಡು ಗ್ರಾಮ ಪಂಚಾಯತ್ ಅಮೃತ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆಯವರು ನೆರವೇರಿಸಿದರು,ಸಮಾರಂಭದಲ್ಲಿ ಉಪಾಧ್ಯಕ್ಷರಾದ ಶ್ವೇತ ,ಪಂಚಾಯತ್ ಅಭಿವೃದ್ಧಿ ಆಧಿಕಾರಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ ಹಾಗು ಕಚೇರಿ ಸಿಬಂದಿಗಳು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ನಿವೃತ್ತಿ ಶಿಕ್ಷಕಿ ಗಂಗಮ್ಮ ಟೀಚರ್ ಜಾನಪದ ಕಥೆ ಪದ್ಯ ಮುಂತಾದ ಚಟುವಟಿಕೆಗಳನ್ನು ಮಾಡಿಸಿದರು. ಸುಮಾರು ಹದಿನೈದು ಶಿಬಿರಾರ್ಧಿಗಳು ಭಾಗವಹಿಸಿದರು.