ಸುಳ್ಯ ವಿಷ್ಣು ಸರ್ಕಲ್ ಬಳಿ ಅಪಘಾತ ಪ್ರಕರಣ; ಲಾರಿ ಬಿಟ್ಟು ಚಾಲಕ ಪರಾರಿ

0

ಸುಳ್ಯ ವಿಷ್ಣು ಸರ್ಕಲ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಲಾರಿ ನಡುವೆ ಇಂದು ಸಂಜೆ ಡಿಕ್ಕಿ ಸಂಭವಿಸಿದೆ.
ಲಾರಿ ಅತಿ ವೇಗದಿಂದ ಹಿಂದಿನಿಂದ ಬಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಗುದ್ದಿದ್ದು, ಚಾಲಕ ಗಾಬರಿಗೊಂಡು ಲಾರಿಯನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.


ಸುಳ್ಯದಿಂದ ಕೊಯನಾಡಿಗೆ ತೆರಳುತ್ತಿದ್ದ ಬಸ್ ಇದಾಗಿದ್ದು ಹಿಂದಿನಿಂದ
ವೇಗವಾಗಿ ಬಂದ ಲಾರಿ (KA 51 AH 9126) ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬಸ್ ನ ಹಿಂಭಾಗ ಜಖಂಗೊAಡಿದೆ. ಘಟನೆಯಿಂದ ಓರ್ವ ಪ್ರಯಾಣಿಕನಿಗೆ ಗಾಯಗಳಾಗಿವೆ ಎಂಬ ಮಾಹಿತಿ ಲಭಿಸಿದೆ. ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.