ಕನಕಮಜಲು: ಮಳೆಗೆ ಮರ ಬಿದ್ದು, ವಿದ್ಯುತ್ ಕಂಬಕ್ಕೆ ಹಾನಿ

0

ಕೆಲಹೊತ್ತು ರಸ್ತೆ ಸಂಚಾರದಲ್ಲಿ ವ್ಯತ್ಯಯ

ಬಾರೀ ಗಾಳಿ ಮಳೆಯಿಂದಾಗಿ ಮರ ಮುರಿದು ವಿದ್ಯುತ್ ಕಂಬ ಹಾಗೂ ರಸ್ತೆಗೆ ಬಿದ್ದ ಪರಿಣಾಮವಾಗಿ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾದ ಘಟನೆ ಕನಕಮಜಲು ಗ್ರಾಮದ ಪಂಜಿಗುಂಡಿ ಬಳಿ ಮೇ.23ರಂದು ಸಂಜೆ ಸಂಭವಿಸಿದೆ.

ಕನಕಮಜಲಿನ ಪಂಜಿಗುಂಡಿ ಬಳಿಯ ಕನಕಕಲಾ ಗ್ರಾಮದ ಬಳಿ ಮುಖ್ಯರಸ್ತೆಯಲ್ಲಿ ಮರ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದು, ವಿದ್ಯುತ್ ಕಂಬ ಮುರಿದಿರುವುದಾಗಿ ತಿಳಿದುಬಂದಿದೆ. ಇದರಿಂದಾಗಿ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತೆಂದು ತಿಳಿದುಬಂದಿದೆ.