ಅಜ್ಜಾವರ : ತೋಟಕ್ಕೆ ಹೋಗಿದ್ದ ಮಹಿಳೆ ಕುಸಿದು ಬಿದ್ದು ಮೃತ್ಯು

0

ಅಜ್ಜಾವರ ಗ್ರಾಮದ ಮಾರ್ಗ ಮನೆ ರಾಮಚಂದ್ರರ ಪತ್ನಿ ಅನಿತಾ ಎಂಬವರು ತೋಟದಲ್ಲಿ ಕುಸಿದು ಬಿದ್ದು‌ ಮೃತಪಟ್ಟ ಘಟನೆ ವರದಿಯಾಗಿದೆ.

ಬೆಳಗ್ಗೆ ರಾಮಚಂದ್ರ ರು ಸುಳ್ಯಕ್ಕೆ ಬಂದಿದ್ದರು. ಮಧ್ಯಾಹ್ನ ಮನೆಗೆ ಹೋದಾಗ ಪತ್ನಿ ಮನೆಯಲ್ಲಿರಲಿಲ್ಲ. ತೋಟಕ್ಕೆ ಹೋಗಿರಬಹುದೆಂದು ಅವರು ತೋಟಕ್ಕೆ ಹೋದಾಗ ಅಲ್ಲಿ ಅನಿತಾ ರವರು ಬಿದ್ದಿದ್ದರೆಂದೂ, ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದರೂ ಫಲಕಾರಿಯಾಗಿಲ್ಲವೆಂದು ತಿಳಿದುಬಂದಿದೆ