ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ

ಜೂನ್ 5ರಂದು ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲಮಾಧ್ಯಮ ಫ್ರೌಢಶಾಲೆ ಗುತ್ತಿಗಾರು ವಿದ್ಯಾಸಂಸ್ಥೆಯಲ್ಲಿ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಾಯಿತು.

ಸಭಾಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂಟಮಲೆ ಅಕಾಡೆಮಿ ಅಧ್ಯಕ್ಷರಾದ ಎ.ಕೆ ಹಿಮಕರ, ಶಾಲಾ ಸಂಚಾಲಕಿ ಸಿಸ್ಟರ್ ಪಾವನ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಲಿಜೋ ಜೋಸ್, ಕರಾಟೆ ಶಿಕ್ಷಕರಾದ ಚಂದ್ರಶೇಖರ ಕನಕಮಜಲು, ಯೋಗ ಶಿಕ್ಷಕರಾದ ವಿಜಯ, ಡ್ಯಾನ್ಸ್ ಶಿಕ್ಷಕಿಯಾದ ಕುಮಾರಿ ರಚಿತಾ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಟ್ರೀಸ ಜೋನ್ ರವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಎ.ಕೆ ಹಿಮಕರರವರು ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಸಹಶಿಕ್ಷಕಿ ಸುಧಾರಾಣಿ ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ಸೌಮ್ಯರವರು ವಂದಿಸಿದರು. ಸಹಶಿಕ್ಷಕಿಯಾದ ಪ್ರೇಮಲತಾ ಕಾರ್‍ಯಕ್ರಮವನ್ನು ನಿರೂಪಿಸಿದರು.
ಕಾರ್‍ಯಕ್ರಮದಲ್ಲಿ ಶಾಲಾವಿದ್ಯಾರ್ಥಿ ವಿದ್ಯಾರ್ಥಿನಿಯರು, ಪೋಷಕರು, ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.