ದಿ.ಪ್ರವೀಣ್ ನೆಟ್ಟಾರು ಸ್ಮರಣಾರ್ಥ ನೆಟ್ಟಾರು ಶಾಲೆ ಮತ್ತು ಪಾಟಾಜೆ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

0

ದಿವಂಗತ ಪ್ರವೀಣ್ ನೆಟ್ಟಾರು ಸ್ಮರಣಾರ್ಥ ಸ.ಹಿ.ಪ್ರಾ.ಶಾಲೆ ನೆಟ್ಟಾರು ಮತ್ತು ಪಾಟಾಜೆ ಸ.ಕಿ.ಪ್ರಾ.ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಜೂ.4 ರಂದು ನಡೆಯಿತು.

ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಹಾಗೂ ಉಪನ್ಯಾಸಕ ಡಾ.ಎಚ್.ಜಿ.ಶ್ರೀಧರ್ ,ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ಉಪನ್ಯಾಸಕರಾದ ಹರೀಶ್ ಶಾಸ್ತ್ರಿ, ನಿವೃತ್ತ ಕಸ್ಟಮ್ಸ್ ಅಧಿಕಾರಿ ಆರ್.ಕೆ.ಭಟ್ ಕುರುಂಬುಡೇಲು,ನೆಟ್ಟಾರು ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ, ಅಕ್ಷಯ ಯುವಕ ಮಂಡಲ ಅಧ್ಯಕ್ಷ ಪದ್ಮನಾಭ ಕೋಡಿಬೈಲ್, ಶೇಖರ ಪೂಜಾರಿ ನೆಟ್ಟಾರು,ಶೀನಪ್ಪ ಪೂಜಾರಿ ನೆಟ್ಟಾರು ಉಪಸ್ಥಿತರಿದ್ದರು.

ನೂತನ ಪ್ರವೀಣ್ ನೆಟ್ಟಾರ್ ಸ್ವಾಗತಿಸಿದರು. ವಸಂತ ನೆಟ್ಟಾರು ಕಾರ್ಯಕ್ರಮ ನಿರೂಪಿಸಿ,ಸುಮಿತ್ ಕಾರ್ಯಾಡಿ ವಂದಿಸಿದರು.ಜಯರಾಮ್ ಪೂಜಾರಿ ಕಾರ್ಯಾಡಿ,ಬಾಲಕೃಷ್ಣ ಪೂಜಾರಿ ಮಂಡ್ಯ,ಶ್ರೀಮತಿ ಸ್ವರ್ಣ,ದೀಪಕ್ ಕುಮಾರ್ ಮುಂಡ್ಯ,ಲೋಕೇಶ್ ಚಾವಡಿಬಾಗಿಲು,ಪ್ರವೀಣ್ ದಾಸನಮಜಲು ಸಹಕರಿಸಿದರು.