ಸುಳ್ಯ ರೋಟರಿ ವಿದ್ಯಾಸಂಸ್ಥೆ : ಫ್ರೆಶರ್ಸ್ ಡೇ

0

ಸುಳ್ಯ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ “ಫ್ರೆಶರ್ಸ್ ಡೇ” ಕಾರ್ಯಕ್ರಮವನ್ನು ಜೂ.6 ರಂದು ಆಯೋಜಿಸಲಾಯಿತು. ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಅಧ್ಯಕ್ಷರಾದ ರೊ.ಚಂದ್ರಶೇಖರ ಪೇರಾಲ್ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ಪ್ರಾಂಶುಪಾಲೆ ಶೋಭಾ ಬೊಮ್ಮೆಟ್ಟಿ ಹೊಸ ವಿದ್ಯಾರ್ಥಿಗಳನ್ನು ಸಂಸ್ಥೆಗೆ ಸ್ವಾಗತಿಸಿ, ಹಿತವಚನಗಳನ್ನಾಡಿದರು. ಸಂಸ್ಥೆಯ ಸಂಚಾಲಕರಾದ ರೊ. ಗಿರಿಜಾಶಂಕರ ತುದಿಯಡ್ಕ, ಟ್ರಸ್ಟಿಗಳಾದ ರೊ. ಆನಂದ ಖಂಡಿಗ ಮತ್ತು ರೊ. ದಯಾನಂದ ಆಳ್ವ ಇವರು ಹೊಸ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ 2022-23 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಪ್ರಣಮ್ ಸಿ ಬಿ ಮತ್ತು ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾದ ವಿದ್ಯಾರ್ಥಿನಿ ಕು. ಧೃತಿ ಕೆದಿಲಾಯ ರನ್ನು ಗೌರವಿಸಲಾಯಿತು. ಕು.ವರ್ಷ, ಕು. ಸಾಹಿತ್ಯ, ಕು. ಸಿಂಚನ, ಕು. ರಮ್ಯಪಾರ್ವತಿ ಪ್ರಾರ್ಥಿಸಿದರು. ಕು.ನಿಖಿತ ಮತ್ತು ಕು. ಅಶ್ವಿನಿ ನಿರೂಪಿಸಿ , ವಿದ್ಯಾರ್ಥಿ ರಾಹಿಲ್ ವಂದಿಸಿದರು.