ಕಾರ್ಯಕರ್ತರನ್ನು ಉಚ್ಚಾಟನೆ ಮಾಡುವ ಮೊದಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ- ಭವಾನಿಶಂಕರ್ ಕಲ್ಮಡ್ಕ

0

ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಅನೇಕ ನಾಯಕರಿಗೆ ಅವಶ್ಯಕತೆ ಇಲ್ಲ. ಗೆಲ್ಲುವ ಅಭ್ಯರ್ಥಿ ನಂದಕುಮಾರ್ ರವರಿಗೆ ಟಿಕೆಟ್ ನೀಡದೆ ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡಿ ಇತಿಹಾಸದಲ್ಲಿಯೇ ಅತೀ ಹೆಚ್ಚು ಅಂತರದಿಂದ ಕಾಂಗ್ರೆಸ್ ನ್ನು ಸೋಲಿಸಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಗ್ಯಾರಂಟಿ ಕಾರ್ಡ್ ಗಳನ್ನು ಮನೆ ಮನೆಗೆ ತಲುಪಿಸದೆ, ಬೂತ್, ಗ್ರಾಮ ಸಮಿತಿ ಸಭೆ ನಡೆಸದೆ, ಕೆಲಸ ಮಾಡದೆ ಗೆಲ್ಲುತ್ತೇವೆ ಎಂಬ ಹುಂಬತನದಿಂದ ವೈಯಕ್ತಿಕ ಪ್ರತಿಷ್ಠೆಗೆ ಪಕ್ಷವನ್ನು ಬಲಿ ಕೊಟ್ಟವರು ಪ್ರಾಮಾಣಿಕ ಕಾರ್ಯಕರ್ತರಿಗೆ ಉಚ್ಚಾಟನೆಯ ನೋಟೀಸ್ ನೀಡುತ್ತಿದ್ದಾರೆ. ನಂದಕುಮಾರ್ ಪರವಾಗಿ ಮತ್ತು ಪಕ್ಷ ಗೆಲ್ಲಬೇಕೆಂಬ ಉದ್ದೇಶ ಹೊಂದಿರುವ ಸಾವಿರಾರು ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ. ಅವರನ್ನು ಸಹ ಉಚ್ಚಾಟನೆ ಮಾಡಲಿ. ಇದು ಕಾರ್ಯಕರ್ತರ ಸ್ವಾಭಿಮಾನಕ್ಕೆ ದಕ್ಕೆ ತರುವಂತ ವ್ಯವಸ್ಥೆ. ಮುಂದೆ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆ ಇದೆ ಅದರ ಬಗ್ಗೆ ಗಮನವಿರಲಿ.
ನೋಟೀಸ್ ನೀಡುವ ಮೊದಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ.