ಎಸ್ ಎಸ್ ಎಫ್ ಗೋಲ್ಡನ್‌ ಫಿಫ್ಟಿ ಮಹಾಸಮ್ಮೇಳನ ಹಿನ್ನಲೆ

0

ಸುಳ್ಯದಲ್ಲಿ ಗೋಲ್ಡನ್ ಸಫಾರಿ ಕಾರ್ಯಕ್ರಮ

ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಗೋಲ್ಡನ್ ಫಿಫ್ಟ್ ಮಹಾಸಮ್ಮೇಳನ ನಡೆಯಲಿದ್ದು ಇದರ ಪ್ರಚಾರರ್ಥ ಗೋಲ್ಡನ್ ಸಫಾರಿ ಎಸ್ ಎಸ್ ಎಫ್ ರಾಜ್ಯ ನಾಯಕರ ಭೇಟಿ ಕಾರ್ಯಕ್ರಮ ಜೂ.13 ರಂದು ಸುಳ್ಯ ಅನ್ಸಾರ್ ಕಾಂಪ್ಲೆಕ್ಸ್ ವಠಾರದಲ್ಲಿ ನಡೆಯಿತು. ಸುಳ್ಯ ಮುಸ್ಲಿಂ ಜಮಾಯತ್ ಸಮಿತಿ ಅಧ್ಯಕ್ಷ ಹಮೀದ್ ಬೀಜಕೊಚ್ಚಿ ಉದ್ಘಾಟಿಸಿದರು.


ಎಸ್ ಎಸ್ ಎಫ್ ರಾಜ್ಯಧ್ಯಕ್ಷ ಅಬೂಸೂಪಿಯಾನ್ ಸಖಾಫಿ,ಮುಸ್ತಫಾ‌ ಹಿಮಮಿ ನಹಿಮಿ ಗೋಲ್ಡನ್ ಸಫಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಎಸ್ ಎಸ್ ಎಪ್ ರಾಜ್ಯ ಕಾರ್ಯದರ್ಶಿ ಸಪ್ವಾನ್ ಚಿಕ್ಕಮಗಳೂರು, ಎಸ್ ಎಸ್ ಎಫ್ ಸುಳ್ಯ ಡಿವಿಜನ್ ಅಧ್ಯಕ್ಷ ಸ್ವಬಾಹ್ ಹಿಮಮಿ ಸಖಾಫಿ,ಎಸ್ ಎಸ್ ಎಫ್ ನಾಯಕರುಗಳಾದ ಜುನೈದ್ ಹಿಮಮಿ,ಕಮರುದ್ದೀನ್ ಸಖಾಫಿ, ಪೈಝಲ್ ಝುಹರಿ,ಮುಜೀಬ್ ಕೊಂಡಗೇರಿ,ಹಮೀದ್ ಸುಣ್ಣಮೂಲೆ,ಶರೀಫ್ ಕುದರೆಗುಂಡಿ,ಉಬೈದುಲ್ಲಾ ಹರೇಕಳ,ಸಿದ್ದೀಕ್ ಕಟ್ಟೆಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು.