ಮಹೇಶ್ ಎಣ್ಮೂರು ರಿಗೆ ಉತ್ತಮ ಕಲಾ ನಿರ್ದೇಶಕ ಪ್ರಶಸ್ತಿ

0

ಕನ್ನಡ ಹಾಗೂ ತುಳು ಚಲನಚಿತ್ರ ರಂಗದಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ ಮಹೇಶ್ ಎಣ್ಮೂರು ರವರು ಕೋಸ್ಟಲ್ ಸಿನಿಮಾ ಅವಾರ್ಡ್ 2023 ರ ಇಂಗ್ಲಿಷ್ ಎಂಕ್ಲೆಗ್ ಬರ್ಪುಜಿ ಬ್ರೋ ಎಂಬ ತುಳು ಚಲನಚಿತ್ರ ಕ್ಕೆ ಉತ್ತಮ ಕಲಾ ನಿರ್ದೇಶಕ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ತುಳು ಚಿತ್ರರಂಗದ ಸೂಪರ್ ಹಿಟ್ ಸಿನಿಮಾ “ಪಿಲಿಬೈಲ್ ಯಮುನಕ್ಕ” ಚಲನಚಿತ್ರ ದಲ್ಲಿ ಕಲಾ ನಿರ್ದೇಶಕ ನಾಗಿ ಕಾಣಿಸಿ ಕೊಂಡ ಇವರು “ಅರ್ಜುನ್ ವೆಡ್ಸ್ ಅಮೃತ, ಮೈ ನೇಮ್ ಇಸ್ ಅಣ್ಣಪ್ಪ, 2ಎಕ್ರೆ, ಅಮ್ಮೆರ್ ಪೊಲೀಸ, ಸೇರಿದಂತೆ ” ಎಂ. ಎಲ್. ಎ., ಲುಂಗಿ ಹಾಗೂ ಇನ್ನೂ ಬಿಡುಗಡೆಗೆ ಸಿದ್ಧವಾಗಿರುವ “ನಾನ್ ವೆಜ್, ನಿರ್ಮುಕ್ತಾ, ಆರಾರಾರಿರೋ, ಅಭೇಧ್ಯಮ್ ಎಂಬ ಕನ್ನಡ ಚಲನಚಿತ್ರ ಗಳಿಗೆ ಕಲಾ ನಿರ್ದೇಶಕ ರಾಗಿ ಕೆಲಸ ಮಾಡಿದ್ದಾರೆ.

ಇವರು ಭಾರತೀಯ ಚಲನ ಚಿತ್ರೋದ್ಯಮದ ಉನ್ನತ ಕಲಾ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ಅಶೋಕ್ ಕೊರಾಳತ್ ರವರ ಜೊತೆ “ಅಶೋಕ್, ಪೌರ್ಣಮಿ, ಅರುಂಧತಿ ” ಸೇರಿದಂತೆ ಹಲವಾರು ತೆಲುಗು ಸಿನಿಮಾಗಳಲಲ್ಲಿ ಹಾಗೂ, ” ಜೀ ಕನ್ನಡ, ಜಿ ತೆಲುಗು, ಮಾ ಟಿವಿ, ಜೆಮಿನಿ ಟಿವಿ ಗಳ ರಿಯಾಲಿಟಿ ಶೋ ಗಳ ವೇದಿಕೆ ವಿನ್ಯಾಸ ಗಳಲ್ಲಿ ಕೆಲಸ ಮಾಡಿ ಉನ್ನತ ಪರಿಣಿತಿ ಹೊಂದಿದ್ದಾರೆ.