ಜೇಸಿಐ ಪಂಜ ಪಂಚಶ್ರೀ ಗೆ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ವಿನ್ನರ್ ,ಡೈಮಂಡ್ ಲೋಮ್ ಪ್ರಶಸ್ತಿ, ವಿದ್ಯಾದಾನ ಪುರಸ್ಕಾರ

0

ಜೇಸಿಐ ಜೋಡುಮಾರ್ಗ ನೇತ್ರಾವತಿಯ ಆತಿಥ್ಯದಲ್ಲಿ ಶುಭಲಕ್ಷ್ಮೀ ಆಡಿಟೋರಿಯಂ ಬೆಂಜನಪದವುನಲ್ಲಿ ಜೂ. 11 ರಂದು ನಡೆದ ಜೇಸಿಐ ವಲಯ 15ರ ವಲಯ ಮಧ್ಯಂತರ ಸಮ್ಮೇಳನ “ನಿಲುಮೆ’ ಯಲ್ಲಿ ಜೇಸಿಐ ಪಂಜ ಪಂಚಶ್ರೀಯು ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ವಿನ್ನರ್ ಪ್ರಶಸ್ತಿ , ಡೈಮಂಡ್ ಲೋಮ್ ಪ್ರಶಸ್ತಿ, ವಿದ್ಯಾದಾನ ಪುರಸ್ಕಾರ ಜೊತೆಗೆ ವಲಯದ ಇನ್ನಿತರ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು ತನ್ನ ಘಟಕದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.


ಜೇಸಿಐ ಪಂಜ ಪಂಚಶ್ರೀಯ ಘಟಕಾಧ್ಯಕ್ಷ JFD ಲೋಕೇಶ್ ಆಕ್ರಿಕಟ್ಟೆ ಯವರು ಈ ಪ್ರಶಸ್ತಿಯನ್ನು ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಯವರಿಂದ ಸ್ವೀಕರಿಸಿದರು. ಜೊತೆಗೆ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ರೈ ಉಪಸ್ಥಿತರಿದ್ದರು.


ಜೇಸಿಐ ಪಂಜ ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ , ಪೂರ್ವಾಧ್ಯಕ್ಷರಾದ ಶಶಿಧರ ಪಳಂಗಾಯ, ಭರತ್ ನೆಕ್ರಾಜೆ, ಚೇತನ್ ತಂಟೆಪ್ಪಾಡಿ, ನಾಗಮಣಿ ಕೆದಿಲ, ಶಿವಪ್ರಸಾದ್ ಹಾಲೆಮಜಲು, ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ, ಪ್ರಕಾಶ್ ಅಳ್ಪೆ, ಅಶ್ವತ್ ಬಾಬ್ಲುಬೆಟ್ಟು, ಗಗನ್ ಕಿನ್ನಿಕುಮ್ರಿ, ಜೀವನ್ ಶೆಟ್ಟಿಗದ್ದೆ, ಪ್ರವೀಣ್ ಕುಂಜತ್ತಾಡಿ, ಕಿರಣ್ ನೆಕ್ಕಿಲ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.