ಪಿಎಂ ಕಿಸಾನ್ ಸಮ್ಮಾನ್ – ಇಕೆವೈಸಿ‌ ಮಾಡದವರಿಗೆ ಹಣ ಬರುವುದಿಲ್ಲ

0

ತಾಲೂಕಿನಲ್ಲಿ 4208 ರೈತರು‌ ಬಾಕಿ – ಕೃಷಿ‌ ಇಲಾಖೆ ಸೂಚನೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣ ಪಡೆದ ಫಲಾನುಭವಿಗಳಿಗೆ E-KYC ಮಾಡಲು ಕಡ್ಡಾಯವಾಗಿರುತ್ತದೆ. E-KYC ಮಾಡಲು ರೈತರು ನಾಗರಿಕಾ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಹಾಗೂ ಬಯೋಮೆಟ್ರಿಕ್ ಮಾಡಲು ಸಾಧ್ಯವಾಗದ ಫಲಾನುಭವಿಗಳು Face app(pm_kisan_signed_11052023.apk) download ಮಾಡಿಕೊಂಡು ಮತ್ತು http://pmkisan.gov.in ಪೋರ್ಟಲ್‌ನ ಪಾರ್ಮಸ್್ರ ಕಾರ್ನರ್ ಮೂಲಕ ಆಧಾರ್ ಸಂಖ್ಯೆ ದಾಖಲಿಸಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರವು ಸೂಚಿಸಿದ್ದು ಇ-ಕೆವೈಸಿ ಮಾಡದೇ ಇರುವ ರೈತರ ಆರ್ಥಿಕ ನೆರವು ಸ್ಥಗಿತಗೊಳಿಸಲಾಗುವುದು.

ಸುಳ್ಯ ತಾಲೂಕಿನ 4208 ರೈತ ಫಲಾನುಭವಿಗಳು E-KYC ಮಾಡಲು ಬಾಕಿ ಇರುತ್ತಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣ ಪಡೆಯುತ್ತಿದ್ದ ಫಲಾನುಭವಿಯು ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣ ಪತ್ರ ಮತ್ತು ಆಧಾರ್ ಪ್ರತಿಯನ್ನು ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಸುಳ್ಯ ಇಲ್ಲಿಗೆ ತಲುಪಿಸಬೇಕಾಗಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.