ಐವರ್ನಾಡು ಪ್ರೌಢಶಾಲಾ ಶಿಕ್ಷಕ ನಾರಾಯಣ ಬೊಳ್ಳೂರು ಹಾಗೂ ಶಿಕ್ಷಕಿ ಸಾಲಿಯಾರವರಿಗೆ ಬೀಳ್ಕೊಡುಗೆ

0

ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಿಕ್ಷಕ ನಾರಾಯಣ ಬೊಳ್ಳೂರು ರವರು ಶಿಕ್ಷಣ ಸಂಯೋಜಕರಾಗಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವರ್ಗಾವಣೆಗೊಂಡಿದ್ದು ಅವರಿಗೆ ಮತ್ತು ಶಿಕ್ಷಕಿ ಸಾಲಿಯ ರವರಿಗೆ ಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವು ಡಿ.13 ರಂದು ನಡೆಯಿತು.


ಶಿಕ್ಷಕ ನಾರಾಯಣ ಬೊಳ್ಳೂರು ದಂಪತಿ ಮತ್ತು ಶಿಕ್ಷಕಿ ಸಾಲಿಯರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ದಯಾನಂದ ಕಟ್ಟತ್ತಾರು ಅಧ್ಯಕ್ಷತೆ ವಹಿಸಿ ಮಾತನಾಡಿದರು.


ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ, ಉದ್ಯಮಿ ಹರೀಶ್ ರಾವ್ ಉದ್ದಂಪಾಡಿ, ಅಜ್ಜಾವರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಗೋಪಿನಾಥ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿಶನ್ ಜಬಳೆ,ಪ್ರೌಢ ಶಾಲಾ ಹಿರಿಯ ಶಿಕ್ಷಕ ಸೂಫಿ ಪೆರಾಜೆ,ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಮಮತ ಉದ್ದಂಪಾಡಿಯವರು 15 ವರ್ಷಗಳ ಕಾಲ ಗಣಿತ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ನಾರಾಯಣ ಬೊಳ್ಳೂರು ಮತ್ತು 3 ವರ್ಷಗಳ ಕಾಲ ಇಂಗ್ಲೀಷ್ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಾಲಿಯರವರಿಗೆ ಶುಭಹಾರೈಸಿದರು.


ಶಾಲಾ ವಿದ್ಯಾರ್ಥಿಗಳಾದ 9 ನೇ ತರಗತಿಯ ತುಷಾರ್ ಮತ್ತು 10 ನೇ ತರಗತಿಯ ಸ್ವಾತಿ,
ರಾಮಚಂದ್ರ ಪಲ್ಲತ್ತಡ್ಕ,ನವೀನ್ ಕುಮಾರ್ ಸಾರಕರೆ,ನಾಗಪ್ಪ ಪಾಲೆಪ್ಪಾಡಿ,ರೇಖಾ ಉದ್ದಂಪಾಡಿ,ಶಿಕ್ಷಕಿ ವಿಜಯರವರು ಶುಭಹಾರೈಸಿ ಮಾತನಾಡಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ,ಶಿಕ್ಷಕಿ ಭವಾನಿ ಸ್ವಾಗತಿಸಿ, ‌ಶಿಕ್ಷಕಿ ಮಲ್ಲಿಕಾರವರು ಕಾರ್ಯಕ್ರಮ ನಿರೂಪಿಸಿ,ಶಿಕ್ಷಕಿ ಶೃತಿ ವಂದಿಸಿದರು.