ಅರಂತೋಡು : ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ದರ ಕಡಿತ ಮಾರಾಟ

0

ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ದರ ಕಡಿತ ಮಾರಾಟವನ್ನು ಅರಂತೋಡು ಕಚೇರಿಯಲ್ಲಿ ನಿವೃತ್ತ ಶಿಕ್ಷಕರಾದ ಜತ್ತಪ್ಪ ಶಿಕ್ಷಕರು ಉದ್ವಾಟಿಸಿದರು. ಅಧ್ಯಕ್ಷತೆಯನ್ನು ಅರಂತೋಡು ಪಂಚಾಯತ್ ಪಿಡಿಓ ಜಯಪ್ರಕಾಶ್ ವಹಿಸಿದ್ದರು.

ವೇದಿಕೆಯಲ್ಲಿ ಅತಿಥಿಗಳಾಗಿ ಜನಜಾಗೃತಿ ವಲಯ ಅಧ್ಯಕ್ಷರಾದ ಸೋಮಶೇಖರ ಪೈಕ ಕಚೇರಿ ಕಟ್ಟಡ ಮಾಲಕರಾದ ಗೋಪಾಲಗೌಡ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ರತ್ನಾವತಿ ಅಳಿಕೆ ವಲಯ ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ, ನಿವೃತ್ತ ದೈಹಿಕ ಶಿಕ್ಷಕರಾದ ಎವಿ ತೀರ್ಥರಾಮ ಅಡ್ಕಬಳೆ ವಹಿಸಿದ್ದರು ವಲಯದ ಸೇವಾಪ್ರತಿನಿದಿಯವರು ಪ್ರಾರ್ಥಿಸಿ, ಸೇವಾಪ್ರತಿನಿದಿ ಶ್ರೀಮತಿ ತಾರಾ ಸ್ವಾಗತಿಸಿ ಸೇವಾ ಪ್ರತಿನಿಧಿ ರೋಹಿಣಿ ವಂದಿಸಿದರು.

ಸೇವಾ ಪ್ರತಿನಿಧಿ ನಿತ್ಯಾನಂದ ಭೀಮಗುಳಿ ನಿರೂಪಿಸಿದರು ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಗುಂಪಿನ ಸದಸ್ಯರು, ವಿ ಎಲ್ ಈ ಪುನೀತ್ ಭಾಗವಹಿಸಿದರು.