ಕಲ್ಮಡ್ಕ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ

0

ಕಲ್ಮಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಜೂ.18 ರಂದು ಕಲ್ಮಡ್ಕ ಶಾಲೆಯಲ್ಲಿ ಜರಗಿತು. ಸಭಾದ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುಬ್ರಾಯ ಓಣ್ಯಡ್ಕ ವಹಿಸಿದ್ದರು.


ಕಾರ್ಯದರ್ಶಿ ಸಾಯಿನಾರಾಯಣ ಕೆ. ವಾರ್ಷಿಕ ವರದಿ, ಜಮಾ ಖರ್ಚು ತಖ್ತೆ ಮತ್ತು ಲೆಕ್ಕ ಪರಿಶೋಧಕರ ದೃಢೀಕರಣ ಪತ್ರ ಮಂಡಿಸಿದರು. ಸಭೆಯಲ್ಲಿ “ನಮ್ಮ ಶಾಲಾಮಕ್ಕಳ ಕಲಿಕಾ ಪ್ರಕ್ರಿಯೆಯ ವಾಸ್ತವಿಕ ಅಂಶಗಳು, ಸಮಸ್ಯೆ ಮತ್ತು ಪರಿಹಾರ” ಎಂಬ ವಿಚಾರದ ಬಗ್ಗೆ ಚರ್ಚಿಸಲಾಯಿತು. ಮೇಲುಸ್ತುವಾರಿ ಸಮಿತಿ ಸದಸ್ಯರೊಂದಿಗೆ ಸಂಘವು ಸಾಧ್ಯತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ತೀರ್ಮಾನಿಸಲಾಯಿತು.


ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಜ್ರಾಕ್ಷಿ ಎಂ., ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಹರೀಶ್ ಜೋಗಿಬೆಟ್ಟು ಉಪಸ್ಥಿತರಿದ್ದರು. ಸತ್ಯಮೂರ್ತಿ ವಿ ಇವರು ಪ್ರಾರ್ಥಿಸಿ, ಉಪಾಧ್ಯಕ್ಷರಾದ ರವೀಂದ್ರ ಮಾಳಿಗೆ ಸ್ವಾಗತಿಸಿದರು.