ಉತ್ತಮ ಸೇವೆಗೆ ಅವಾರ್ಡ್ ಪಡೆದ ಸಂಪಾಜೆ ಲಯನ್ಸ್ ಕ್ಲಬ್

0

ಸಕಲೇಶಪುರ ಬಂಟರ ಭವನದಲ್ಲಿ ನಡೆದ ” ಕೃತಜ್ಞ ” ಅವಾರ್ಡ್ ಕಾರ್ಯಕ್ರಮದಲ್ಲಿ ಸಂಪಾಜೆ ಲಯನ್ಸ್ ಕ್ಲಬ್ ನಾಲ್ಕನೇ ಬೆಸ್ಟ್ ಕ್ಲಬ್ ಪ್ರಶಸ್ತಿ ಪಡೆದುಕೊಂಡಿದೆ.


ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ ಮತ್ತು ಪ್ರಥಮ ಮಹಿಳೆ ಪ್ರಗತಿ ಶೆಟ್ಟಿ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಿದರು. ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷೆ ನಳಿನಿ ಕಿಶೋರ್ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಿದರು.