














ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು, ಅರಂತೋಡು, ಇಲ್ಲಿ ಪ್ರಣವ ಫೌಂಡೇಶನ್ ವತಿಯಿಂದ ನೀಡಿದ ಸ್ಮಾರ್ಟ್ ಕ್ಲಾಸ್ ಉದ್ಘಾಟನ ಕಾರ್ಯಕ್ರಮವು ಜೂ.೨೮ರಂದು ನಡೆಯಿತು. ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಎಸ್. ರಮೇಶ್ ವಹಿಸಿ ಇಂದಿನ ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆ ಅನಿವಾರ್ಯ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ನೆರವಾಗುವ ಈ ತಂತ್ರಜ್ಞಾನವನ್ನು ನೀಡಿದ ಪ್ರಣವ ಫೌಂಡೇಶನ್ ನ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಿ ಯು ಕಾಲೇಜುನ ಎಲ್ಲಾ ಸಿಬ್ಬಂದಿಗಳು ಹಾಗೂ ಪ್ರಣವ ಫೌಂಡೇಶನ್ನ ಪದಾಧಿಕಾರಿಗಳು ಇದ್ದರು.









