ಸುರಕ್ಷಾ ದಂತ ಚಿಕಿತ್ಸಾ ಲಯದ 27 ನೆಯ ಸಂಸ್ಥಾಪನಾ ದಿನಾಚರಣೆ

0

ಸುರಕ್ಷಾ ದಂತ ಚಿಕಿತ್ಸಾ ಲಯದ 27 ನೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜು. 3 ರಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಸುಮಾರು 55 ಮಂದಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ನಿವೃತ್ತ ಬ್ಯಾಂಕ್ ಉದ್ಯೋಗಿ ವಾಸುದೇವ ಹೊಳ್ಳರಿಗೆ ಹಲಸಿನಹಣ್ಣಿನ ಗಿಡವನ್ನು ಡಾ. ಮುರಲಿ ಮೋಹನ್ ಚೂಂತಾರು ನೀಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಾ. ರಾಜಶ್ರೀ ಮೋಹನ್, ದಂತ ಪರಿಚಾರಕಿಯರಾದ ರಮ್ಯಾ, ಚೈತ್ರಾ, ಸುಷ್ಮಿತಾ, ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು. ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಪ್ರಮೋದ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.