ಕಲ್ಚರ್ಪೆಗೆ ಮೆಷಿನ್ ಬಂದ್ರು ಕಸದ ಸಮಸ್ಯೆ ನಿಂತಿಲ್ಲ….

0

ಎಲ್ಲೆಂದರಲ್ಲಿ ರಾಶಿ ಬೀಳುತ್ತಿದೆ ನ.ಪಂ.ನ ಕಸ

ಕಲ್ಚರ್ಪೆಯಲ್ಲಿ ಕಸದ ರಾಶಿಗೆ ಮುಕ್ತಿ ನೀಡಲು ಹೊರಟಿರುವ ನಗರ ಪಂಚಾಯತ್ ಕಸದಿಂದ ರಸ ತಯಾರಿಸಲು ಮೆಷಿನ್ ಅಳವಡಿಸಿತ್ತು. ಅದು ಈಗ ಚಟುವಟಿಕೆ ಆರಂಭಿಸಿದ್ದರೂ ಕಸವನ್ನು ಮತ್ತೆ ಸುತ್ತಮುತ್ತ ತಂದು ಹಾಕತೊಡಗಿದ್ದಾರೆ ಎಂದು ಊರವರು ಆರೋಪಿಸಿದ್ದಾರೆ.‌

ಕಾಡಿನಿಂದ ಬರುವ ಮಳೆ‌ನೀರು ಕಸದ ರಾಶಿಯೊಂದಿಗೆ ಪಯಸ್ವಿನಿಯ‌ನ್ನು ಸೇರುತ್ತಿದೆ ಎಂದು ತಿಳಿದು ಬಂದಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಸೂಕ್ತ ಕ್ರಮ‌ಕೈಗೊಂಡು ಕಸದ ರಾಶಿಗೆ ಮುಕ್ತಿ‌ ಹೇಳಬೇಕಾಗಿದೆ.