ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸೋನ ಅಡ್ಕಾರು ಪ್ರಥಮ

0

ಥೈಲ್ಯಾಂಡ್ ನಲ್ಲಿ ಜರುಗಲಿರುವ ಏಷ್ಯನ್ ಗೇಮ್ಸ್ ಯೋಗ ಸ್ಪರ್ಧೆಗೆ ಆಯ್ಕೆ

ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ
ಜೂ.9ರಂದು ಜರುಗಿದ ಮುಕ್ತ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸೋನ ಅಡ್ಕಾರು ಅವರು ಭಾಗವಹಿಸಿ, ಪ್ರಥಮ ಸ್ಥಾನವನ್ನು ಪಡೆದು ಥೈಲ್ಯಾಂಡಿನಲ್ಲಿ ಜರುಗಲಿರುವ ಏಷ್ಯನ್ ಗೇಮ್ಸ್ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಫರ್ಧೆಯು ಥೈಲ್ಯಾಂಡ್ ನಲ್ಲಿ ಸೆ.29ರಂದು ಜರುಗಲಿದ್ದು, ಸೋನ ಅವರು ಥೈಲ್ಯಾಂಡ್ ನಲ್ಲಿ ಜರುಗಲಿರುವ ಏಷ್ಯನ್ ಗೇಮ್ಸ್ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈಕೆ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಜಾಲ್ಸೂರು ಗ್ರಾಮದ ಅಡ್ಕಾರಿನ ಶರತ್ ಅಡ್ಕಾರು ಹಾಗೂ ಶ್ರೀಮತಿ ಶೋಭಾ ಶರತ್ ದಂಪತಿಯ ಪುತ್ರಿ. ಯೋಗೇನ ಚಿತ್ತಸ್ಯ ಯೋಗಕೇಂದ್ರದ ಸಂತೋಷ್ ಮುಂಡಕಜೆಯವರ ಶಿಷ್ಯೆ.