ಮಹಿಳೆಯ ಮಾನಭಂಗ ಯತ್ನ – ಪ್ರಕರಣ ದಾಖಲು

0

ಅಮರಮುಡ್ನೂರು ಗ್ರಾಮದ ನೆಲ್ಲಿಕುಂಜದಲ್ಲಿ ಮಹಿಳೆಯೋರ್ವರು ರಸ್ತೆಯಲ್ಲಿ ನಡೆದುಕೊಡು ಹೋಗುತ್ತಿರುವಾಗ ವ್ಯಕ್ತಿಯೋರ್ವರು ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಪೊಲೀಸು ದೂರು ನೀಡಿದ ಘಟನೆ ಜು.18 ರಂದು ನಡೆದಿದೆ.


ನೆಲ್ಲಿಕುಂಜದಲ್ಲಿ ಮಹಿಳೆಯೋರ್ವರು ಕೂಲಿ ಕೆಲಸ ಮುಗಿಸಿ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಬಾಲಚಂದ್ರ ಗೌಡ ಎಂಬವರು ತಡೆದು ನಿಲ್ಲಿಸಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ಮಹಿಳೆ ಪೊಲೀಸು ದೂರು ನೀಡಿದ್ದು.
ಈ ಬಗ್ಗೆ ಬಾಲಚಂದ್ರ ಗೌಡ ಎಂಬವರು ಮೇಲೆ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.