ಹಳೆಗೇಟು : ನಿಂತಿದ್ದ ವ್ಯಾನ್‌ಗೆ ಹಾಲಿನ ವ್ಯಾನ್ ಡಿಕ್ಕಿ, ವಾಹನಗಳು ಜಖಂ

0



ನಿಂತಿದ್ದ ವ್ಯಾನ್‌ಗೆ ಹಾಲಿನ ವ್ಯಾನ್ ಡಿಕ್ಕಿ ಹೊಡೆದು ವಾಹನಗಳು ಜಖಂಗೊಂಡ ಘಟನೆ ಸುಳ್ಯದ ಹಳೆಗೇಟಿನ ಜಯನಗರ ರಸ್ತೆಯಲ್ಲಿ ಸಂಭವಿಸಿದೆ.

ಸುಳ್ಯದ ಹಳೆಗೇಟು ಜಯನಗರ ರಸ್ತೆಯಲ್ಲಿ ಮಹಾಲಕ್ಷ್ಮಿ ವ್ಯಾನ್ ಇಲೆಕ್ಟ್ರಿಕಲ್ ರಿಪೇರಿ ಮಾಡಿಸಿ ನಿಂತಿತ್ತು. ಆ ಸಮಯದಲ್ಲಿ ಜಯನಗರ ಭಾಗದಿಂದ ಬರುತ್ತಿದ್ದ ಹಾಲು ವಿತರಣೆ ಮಾಡುವ ವಾಹನ ವ್ಯಾನ್ ಡಿಕ್ಕಿ ಹೊಡೆಯಿತು. ಪರಿಣಾಮ ವ್ಯಾನ್ ಮುಂದಕ್ಕೆ ಚಲಿಸಿ ಮರಕ್ಕೆ ಗುದ್ದಿ ಜಖಂಗೊಂಡಿದೆ ಎಂದು ತಿಳಿದುಬಂದಿದೆ. ಎರಡೂ ವಾಹನಗಳು ಜಂಖಗೊಂಡಿದ್ದು,
ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.