ಕೆ.ವಿ.ಜಿ.ಪಾಲಿಟೆಕ್ನಿಕ್ : ತುಕ್ರ ಜಿ.ಎಂ ರವರಿಗೆ ಬೀಳ್ಕೊಡುಗೆ

0

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಸಿವಿಲ್ ವಿಭಾಗದಲ್ಲಿ ಮೆಕ್ಯಾನಿಕ್ ಆಗಿ ಸೇವೆ ಸಲ್ಲಿಸಿ, ಇದೇ ಜುಲೈ 31 ರಂದು ವಯೋ ನಿವ್ರತ್ತಿ ಹೊಂದಿದ ತುಕ್ರ ಜಿ.ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ ವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು .


ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಸಮಾರಂಭದ ವೇದಿಕೆಯಲ್ಲಿ ಸಂಸ್ಥೆಯ ಅಕಾಡೆಮಿಕ್ ಡೀನ್ ಚಂದ್ರಶೇಖರ ಎಂ.ಎನ್. ಸಿವಿಲ್ ವಿಭಾಗದ ಮುಖ್ಯಸ್ಥ ದೇವರಾಜ್ ಜಿ.ಕೆ, ಕಛೇರಿ ಅಧೀಕ್ಷಕ ಶಿವರಾಮ ಕೇರ್ಪಳ ಉಪಸ್ಥಿತರಿದ್ದರು. ದೇವರಾಜ ಜಿ.ಕೆ ಹಾಗೂ ಲೆಕ್ಕ ಪತ್ರ ಅಧೀಕ್ಷಕ ಧನಂಜಯ ಕಲ್ಲುಗದ್ದೆ ಅಭಿನಂದನಾ ಮಾತುಗಳನ್ನಾಡಿದರು.


ಕೆ.ವಿ.ಜಿ.ಪಾಲಿಟೆಕ್ನಿಕ್ ನಲ್ಲಿ ಸುಧೀರ್ಘ 37 ವರ್ಷಗಳ ಸೇವೆ ಸಲ್ಲಿಸಿ ನಿವ್ರತ್ತರಾದ ತುಕ್ರ ಜಿ.ಎಂ ರವರಿಗೆ ಆಡಳಿತ ಮಂಡಳಿ, ಕೆ.ವಿ.ಜಿ.ಪಾಲಿಟೆಕ್ನಿಕ್ ಮತ್ತು ಸಿವಿಲ್ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.

ಶ್ರೀಮತಿ ಪದ್ಮಾವತಿ ಹಾಗೂ ಶ್ರೀಮತಿ ಜಯಲಕ್ಷ್ಮಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಿವಿಲ್ ವಿಭಾಗದ ಉಪನ್ಯಾಸಕ ಸುನಿಲ್ ಕುಮಾರ್ ಎನ್.ಪಿ. ಸನ್ಮಾನ ಪತ್ರ ವಾಚಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ವಿವೇಕ್ ಪಿ ಸ್ವಾಗತಿಸಿ, ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕ ರಂಗಸ್ವಾಮಿ ವಂದಿಸಿದರು. ಸಿವಿಲ್ ವಿಭಾಗದ ಶಿಕ್ಷಕ ನಾರಾಯಣ ತೋರಣಗುಂಡಿ ನಿರೂಪಿಸಿದರು.