ಕನಕಮಜಲು: ದಿ. ಪದ್ಮಾವತಿ ಬುಡ್ಲೆಗುತ್ತು ಅವರ ವೈಕುಂಠ ಸಮಾರಾಧನೆ – ನುಡಿನಮನ ಸಲ್ಲಿಕೆ

0


ಕನಕಮಜಲು ಗ್ರಾಮದ ಬುಡ್ಲೆಗುತ್ತು ದಿ. ಪದ್ಮಾವತಿ ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಬುಡ್ಲೆಗುತ್ತು ಮನೆಯಲ್ಲಿ ಆ.1ರಂದು ಜರುಗಿತು.


ಚೊಕ್ಕಾಡಿ ಸತ್ಯಸಾಯಿ ವಿದ್ಯಾಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ ಕೋಟೆ ಹಾಗೂ ನಿವೃತ್ತ ಶಿಕ್ಷಕ ಸೀತಾರಾಮ ಗೌಡ ಬುಡ್ಲೆಗುತ್ತು ಅವರು ಶ್ರೀಮತಿ ಪದ್ಮಾವತಿ ಅವರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಚೊಕ್ಕಾಡಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ವತಿಯಿಂದ ಭಗವನ್ನಾಮ ಸಂಕೀರ್ತನೆ ಜರುಗಿತು.
ಸಭೆಯಲ್ಲಿ ದಿ. ಪದ್ಮಾವತಿ ಬುಡ್ಲೆಗುತ್ತು ಅವರ ಪುತ್ರರಾದ ತೇಜ್ ಪ್ರಕಾಶ್ ಬುಡ್ಲೆಗುತ್ತು ರವಿಪ್ರಕಾಶ್ ಬುಡ್ಲೆಗುತ್ತು, ಪುತ್ರಿ ಶ್ರೀಮತಿ ಸಂಧ್ಯಾ, ಸೊಸೆಯಂದಿರಾದ ಶ್ರೀಮತಿ ಅನುಸೂಯ ಬುಡ್ಲೆಗುತ್ತು, ಶ್ರೀಮತಿ ಮಮತ ಬುಡ್ಲೆಗುತ್ತು, ಅಳಿಯ ಶಶಿಧರ ಕುಳ್ಳಪ್ಪಾಡಿ ,ಮೊಮ್ಮಕ್ಕಳು , ಬುಡ್ಲೆಗುತ್ತು ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.