ಸುಬ್ರಹ್ಮಣ್ಯಕ್ಕೆ ಬಂದ ತಾಯಿ, ಮಗ ಕಾಣೆ

0

ಸುಬ್ರಹ್ಮಣ್ಯ ಠಾಣೆಯಲ್ಲಿ ಗಂಡನಿಂದ ದೂರು ದಾಖಲು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ತಾಯಿ, ಮಗ ಕಾಣೆ ಕಾಣೆಯಾದ ಘಟನೆ ಜು.31 ವರದಿಯಾಗಿದ್ದು ಈ ಬಗ್ಗೆ
ಸುಬ್ರಹ್ಮಣ್ಯ ಠಾಣೆಯಲ್ಲಿ ಗಂಡ ದೂರು ನೀಡಿದ ಘಟನೆ ವರದಿಯಾಗಿದೆ.

ಸುಬ್ರಹ್ಮಣ್ಯ ಠಾಣೆಗೆ ಆ.1 ರಂದು ದೂರು ನೀಡಿರುವ ಬೆಂಗಳೂರು ಗ್ರಾಮಾಂತರದ ರಾಜಶೇಖರ್ ಅವರು ನನ್ನ ಪತ್ನಿ 28 ಪ್ರಾಯದ ಹರ್ಷಿತ ಮತ್ತು ಮೂರು ವರ್ಷ ಪ್ರಾಯದ ಭಗತ್, ಆದಿ ಸುಬ್ರಹ್ಮಣ್ಯ ಬಳಿಯಿಂದ ಜು.31 ರಂದು ಕಾಣೆಯಾಗಿರುವುದಾಗಿಯೂ, ಹುಡುಕಿದರೂ ಸಿಕ್ಕಿರುವುದಿಲ್ಲ. ಸಂಬಂಧಿಕರಲ್ಲಿ ವಿಚಾರಿಸಿದಾಗ ಎಲ್ಲೂ ಮಾಹಿತಿ ಸಿಕ್ಕಿರುವುದಿಲ್ಲ ಹುಡುಕಿ ಕೊಡುವಂತೆ ಕೇಳಿಕೊಂಡಿದ್ದಾರೆ.