ಬೊಳಿಯಮಜಲು: ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಮಂಡಳಿ ಮಹಾಸಭೆ

0

ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯದ ಬೊಳಿಯಮಜಲು ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಮಂಡಳಿಯ ಮಹಾಸಭೆಯು ಜೂ.17ರಂದು ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮೋನಪ್ಪ ಗೌಡ ಅಡ್ಕಬಳೆ, ಉಪಾಧ್ಯಕ್ಷರಾಗಿ ನವೀನ್ ಕುಮಾರ್ ಕೆ.ಎನ್., ಕಾರ್ಯದರ್ಶಿಯಾಗಿ ಜಗದೀಶ್ ಪೂಜಾರಿ, ಕೋಶಾಧಿಕಾರಿಯಾಗಿ ಕೃಷ್ಣ ಬೆಟ್ಟ, ಜೊತೆ ಕಾರ್ಯದರ್ಶಿಯಾಗಿ ದೇವರಾಜ್ ಕುದ್ಪಾಜೆ ಆಯ್ಕೆಯಾದರು.

ನಿರ್ದೇಶಕರುಗಳಾಗಿ ದಿನೇಶ್ ಮಡಪ್ಪಾಡಿ, ಡಾ. ರಂಗಯ್ಯ ಎಸ್., ರಾಮಚಂದ್ರ ಪೆಲ್ತಡ್ಕ, ಹೂವಪ್ಪ ಗೌಡ ಬಂಗಾರಕೋಡಿ, ಮಾಯಿಲಪ್ಪ ಬೊಳಿಯಮಜಲು, ಕುಶಾಲಪ್ಪ ಸೂರ್ತಿಲ, ಸಿ.ಪಿ. ರವಿಪ್ರಕಾಶ್, ಆನಂದ ನಡುಮುಟ್ಲು, ಮಹೇಶ್ ಜಟ್ಟಿಪಳ್ಳ ಹಾಗೂ ಸಂಚಾಲಕರಾಗಿ ಮಾದವ ಜಟ್ಟಪಳ್ಳ ಆಯ್ಕೆಯಾದರು.