ದೇಶಕ್ಕಾಗಿ ಪೆಟ್ರೋಲ್ ದರ ಏರಿಸಿ ಎಂದವರು ರಾಜ್ಯದ ಅಭಿವೃದ್ಧಿಗಾಗಿ ಏರಿಕೆಗೆ ಪ್ರತಿಭಟನೆ ಯಾಕೆ? ಎಂ.ವಿ.ಜಿ.ಪ್ರಶ್ನೆ

0

ಪ್ರೆಟ್ರೋಲ್ ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆಗೆ ನ.ಪಂ.ಸದಸ್ಯ ,ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.ಅಂದು ಪೆಟ್ರೊಲ್ ,ಡಿಸೇಲ್ ಬೆಲೆ ಲೀಟರೊಂದಕ್ಕೆ ರೂಪಾಯಿ 30 ಏರಿದರೂ ಕಣ್ಣಿದ್ದು ಕುರುಡಾರಾಗಿ ,ಕಿವಿದ್ದು ಕಿವುಡರಾಗಿ ,ಬಾಯಿ ಇದ್ದು ಮೂಕರಾಗಿ ವರ್ತಿಸಿದ್ದ ಬಿಜೆಪಿ ,ಇಂದು ಕಾಂಗ್ರೆಸ್ ಸರಕಾರ ರಾಜ್ಯದ ಅಭಿವೃದ್ದಿಗಾಗಿ ಲೀಟರೊಂದಕ್ಕೆ ರೂ 3 ಏರಿಸಿದರೆ ಬಿಜೆಪಿಗೆ ಉರಿಯಲು ಪ್ರಾರಂಭವಾಗಿದೆ .ಇದೀಗ ಬೀದಿಗೆ ಇಳಿದಿದ್ದಾರೆ.ಒಳ್ಳೆಯದ್ದೇ, ಆದರೆ ಅಂದು ದೇಶಕ್ಕಾಗಿ ಅಂತ ಹೇಳಿದವರಿಗೆ ಇಂದು ರಾಜ್ಯಕ್ಕಾಗಿ ಅಂತ ಯಾಕೆ ಹೇಳಬಾರದು ? ಬಿಜೆಪಿಗೆ ಏನಾದರೂ ಮರೆವು ರೋಗ ಬಂದಿದೆಯೇ ?ಅಂತ ಪ್ರಶ್ನೆ ಮಾಡುವ ಕಾಲ ಜನರಿಗೆ ಬಂದಿದೆ. ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.