ಪೈಂಬೆಚ್ಚಾಲು ಶಾಲೆಗೆ ಲ್ಯಾಪ್ ಟಾಪ್ ಹಾಗೂ ಸೌಂಡ್ ಬಾಕ್ಸ್ ಮೈಕ್ ಕೊಡುಗೆ

0

ಪೈಂಬೆಚ್ಚಾಲು ಸ ಕಿ ಪ್ರಾ ಶಾಲೆಗೆ ದಾನಿಗಳಾದ ಡಾಕ್ಟರ್ ಮಹಮ್ಮದ್ ದರ್ಖಾಸ್ ರವರು ಲ್ಯಾಪ್ ಟಾಪ್ ಮತ್ತು ಸೌಂಡ್ ಬಾಕ್ಸ್ ಮೈಕ್ ನ್ನು ಕೊಡುಗೆಯಾಗಿ ನೀಡಿರುತ್ತಾರೆ.

ಇವರೊಂದಿಗೆ ಇವರ ಸಹೋದರರಾದ ಮೂಸಾ ದರ್ಖಾಸ್ ರವರು ಮತ್ತು ಎಸ್.ಡಿ ಎಂ. ಸಿ ಅಧ್ಯಕ್ಷರಾದ ಅಬ್ದುಲ್ ಕುಂಞಿ ಯವರು ಕೈಜೋಡಿಸಿರುತ್ತಾರೆ. ಇವರು ಈ ಹಿಂದೆ ಪೈಂಬೆಚ್ಚಾಲು ಶಾಲೆಗೆ ಪ್ರಿಂಟರ್ ನ್ನು ಕೊಡುಗೆಯಾಗಿ ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿ ವಿಶಾಲಾಕ್ಷಿ ವಿ ಎಸ್ ರವರು ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಪ್ರತಿಮಾರವರು ವಂದಿಸಿದರು.