ಕಳಂಜ ಗ್ರಾ.ಪಂನ ಅಧ್ಯಕ್ಷರಾಗಿ ಬಾಲಕೃಷ್ಣ ಬೇರಿಕೆ, ಉಪಾಧ್ಯಕ್ಷರಾಗಿ ಪ್ರೇಮಲತ ಆಯ್ಕೆ

0

ಕಳಂಜ ಗ್ರಾ.ಪಂ.ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಬೇರಿಕೆ ಮಾತ್ರ ನಾಮಪತ್ರ ಸಲ್ಲಿಸಿರುವ ಕಾರಣ ಬಾಲಕೃಷ್ಣ ಬೇರಿಕೆಯವರು ಅಧ್ಯಕ್ಷರಾಗಿಯೂ, ಉಪಾಧ್ಯಕ್ಷತೆ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿರುವುದರಿಂದ ಆ ಕ್ಷೇತ್ರದ ಏಕೈಕ ಸದಸ್ಯೆ ಶ್ರೀಮತಿ ಪ್ರೇಮಲತ ಅವಿರೋಧವಾಗಿ ಆಯ್ಕೆಯಾದರು. ಗ್ರಾಮೀಣ ನೀರು ಮತ್ತು ನೈರ್ಮಲ್ಯ ಅಭಿಯಂತರರಾದ ಮಣಿಕಂಠ ಚುನಾವಣೆ ನಡೆಸಿಕೊಟ್ಟರು. ಪಂಚಾಯತ್ ಪಿ.ಡಿ.ಒ. ಶ್ರೀಮತಿ ಗೀತಾ ಡಿ.ಎಸ್, ಕಾರ್ಯದರ್ಶಿ ಪದ್ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.