ಮಾಣಿಮರ್ಧು – ಕೋಡಂಬಾರೆ ಮಂಜೂರುಗೊಂಡ ಸೇತುವೆ ಬೇರೆ ಕಡೆಗೆ ವರ್ಗಾವಣೆ, ಲೋಕಾಯುಕ್ತಕ್ಕೆ ದೂರು

0

ಆಲೆಟ್ಟಿ ಗ್ರಾಮದ 2 ನೆ ವಾರ್ಡಿನ ಮಾಣಿಮರ್ಧು ಪಂಚಾಯತ್ ರಸ್ತೆಗೆ ಕೋಡಂಬಾರೆ ಎಂಬಲ್ಲಿ ಸುಮಾರು 12 ಲಕ್ಷ ವೆಚ್ಚದ ಕಾಲುಸಂಕ ಮಂಜೂರು ಗೊಂಡಿದ್ದು ಇದನ್ನು ಊರಿನ ನಿವಾಸಿಗಳೊಂದಿಗೆ ತಿಳಿಸದೆ ಬೇರೆ ಕಡೆಗೆ ವರ್ಗಾವಣೆ ಮಾಡಿ ಅನ್ಯಾಯ ಮಾಡಿದ್ದು ಈ ಬಗ್ಗೆ ಮಾಣಿಮರ್ಧು ನಿವಾಸಿಗಳು ಲೋಕಾಯುಕ್ತ ಕ್ಕೆ ದೂರು ನೀಡಿದ ಘಟನೆ ವರದಿಯಾಗಿದೆ. ನಾವು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು ಈವರೆಗೆ ಯಾವುದೇ ಮೂಲಭೂತ ಸೌಲಭ್ಯಸಿಗದೆ ನರಕಯಾತನೆ ಅನುಭವಿಸುತ್ತಿದ್ದೆವೆ.

ಬಂದ ಅನುದಾನವನ್ನೂ ಕೂಡ ಬೇರೆ ಕಡೆಗೆ ವರ್ಗಾವಣೆ ಮಾಡಿ ಅನ್ಯಾಯ ಮಾಡಿದ ಜನಪ್ರತಿನಿಧಿಗಳು ಅಧಿಕಾರಿಗಳು ಸಂಬಂಧಿಸಿದ ಇಲಾಖೆಗಳ ತನಿಖೆ ನಡೆಸಬೇಕು. ಬಂದ ಅನುದಾನವನ್ನು ಮಂಜೂರಾದ ಸ್ಥಳದಲ್ಲೆ ಸೇತುವೆ ರಚಿಸಬೇಕು. ಬೇರೆ ಕಡೆ ರಚಿಸಿದ ಸೇತುವೆಯ ಬಿಲ್ಲ್ ತಡೆ ಹಿಡಿಯಬೇಕು ಎಂದು ಲೋಕಾಯುಕ್ತ ಅದಿಕಾರಿಗಳಿಗೆ ಮತ್ತು ಪರಿಶಿಷ್ಟ ಪಂಗಡಗಳು ಕುಂದುಕೊರತೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.