ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕೇಶವ ಅಡ್ತಲೆ, ಉಪಾಧ್ಯಕ್ಷರಾಗಿ ಭವಾನಿ ಚಿಟ್ಟನ್ನೂರ್ ಆಯ್ಕೆ

0


ಅಧ್ಯಕ್ಷ ಸ್ಥಾನಾಕಾಂಕ್ಷಿಯಾಗಿದ್ದ ಶಿವಾನಂದ ಕುಕ್ಕುಂಬಳರಿಗೆ ಸೋಲು


ಅರಂತೋಡು ಗ್ರಾಮ ಪಂಚಾಯತ್ ೨ನೇ ಅವಧಿ ಗೆ ಅಧ್ಯಕ್ಷತೆಗೆ ಚುನಾವಣೆ ನಡೆದು ಕೇಶವ ಅಡ್ತಲೆರವರು ೧೨ ಮತ ಪಡೆದು ವಿಜಯಿಯಾಗಿದ್ದಾರೆ. ಶಿವಾನಂದ ಕುಕ್ಕುಂಬಳರವರು ೩ ಮತ ಪಡೆದು ಪರಭಾವಗೊಂಡರು.
ಇಬ್ಬರೂ ನಾಮಪತ್ರ ಹಿಂಪಡೆಯದ ಕಾರಣ ಅಧ್ಯಕ್ಷತೆಗೆ ಚುನಾವಣೆ ನಡೆಸಲಾಯಿತು.
ಹಿಂದುಳಿದ ವರ್ಗ ಎ ಮಹಿಳಾ ವಿಭಾಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾವುದೇ ಅಭ್ಯರ್ಥಿ ಇಲ್ಲದ ಕಾರಣ ಭವಾನಿ ಚಿಟ್ಟನ್ನೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಶಿಕ್ಷಣ ಇಲಾಖೆಯ ಸೂಫಿ ಪೆರಾಜೆ ಉಪಸ್ಥಿತರಿದ್ದರು. ಪಿಡಿಓ ಜಯಪ್ರಕಾಶ್ ಮತ್ತು ಪಂಚಾಯತ್ ಸಿಬ್ಬಂದಿ ಸಹಕರಿಸಿದರು.