ಸೆ.2 ರಂದು ಚೊಕ್ಕಾಡಿಯಲ್ಲಿ ಯುವಜನ ಸಂಯುಕ್ತ ಮಂಡಳಿ ಆಶ್ರಯದಲ್ಲಿ ಜಾನಪದ ಸಾಂಸ್ಕೃತಿಕ ವೈಭವ

0

ಜನಪದ ಪ್ರಕಾರಗಳ ಮುಕ್ತ ನೃತ್ಯ ಸ್ಪರ್ಧೆ

ಸುಳ್ಯ ಯುವಜನ ಸಂಯುಕ್ತ ಮಂಡಳಿ ಆಶ್ರಯದಲ್ಲಿ ಸೆ.2 ರಂದು ಸುವರ್ಣ ರಂಗ, ರಂಗ ಮಂದಿರ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಜಾನಪದ ಸಾಂಸ್ಕೃತಿಕ ವೈಭವ ಹಾಗೂ ಜಾನಪದ ಪ್ರಾಕಾರಗಳ ಮುಕ್ತ ಸ್ಪರ್ಧೆಯು ಸೆ.2 ರಂದು‌ ನಡೆಯಲಿದೆ.

ಭಾಗವಹಿಸುವ ಯುವಕ ಮಂಡಲಗಳಿಗೆ ಒಂದಕ್ಕಿಂತ ಹೆಚ್ಚು ಕರ್ನಾಟಕದ ಮೂಲ ಜನಪದ ನೃತ್ಯ ಪ್ರಕಾರಗಳನ್ನು ಪ್ರಸ್ತುತ ಪಡಿಸಲು ಅವಕಾಶವಿದೆ. ಪ್ರದರ್ಶನದ ಒಟ್ಟು ಅವಧಿ 18 ನಿಮಿಷಗಳು (3 ನಿಮಿಷ ತಯಾರಿಗೆ. ತಂಡದಲ್ಲಿ ಕನಿಷ್ಠ 8 ಕಲಾವಿದರು ಭಾಗವಹಿಸತಕ್ಕದ್ದು. ಗರಿಷ್ಠ ಮಿತಿ ಯಿಲ್ಲ. ವಯಸ್ಸಿನ ಯಾವುದೇ ನಿರ್ಬಂಧವಿಲ್ಲ. ಯುವಕ ಮತ್ತು ಯುವತಿಯರು ಜೊತೆಯಾಗಿ ಸ್ಪರ್ಧೆಯಲ್ಲಿ ಭಾಗವಹಿಸ ಬಹುದು.

ಪ್ರದರ್ಶನಕ್ಕೆ ಅಗತ್ಯ ವಾದ ಸಂಗೀತ ಪರಿಕರಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ತಂಡವೇ ತರಬೇಕು. ಬೆಂಕಿ, ನೀರು, ಸ್ಫೋಟಕ ವಸ್ತುಗಳನ್ನು ವೇದಿಕೆ ಯಲ್ಲಿ ಬಳಸಲು ಅವಕಾಶ ವಿಲ್ಲ ( ದೀಪವನ್ನು ಹೊರತುಪಡಿಸಿ ) ಒಂದು ತಂಡದ ಕಲಾವಿದರು ಇನ್ನೊಂದು ತಂಡದಲ್ಲಿ ಭಾಗವಹಿಸುವಂತಿಲ್ಲ.
ಧ್ವನಿ ಮುದ್ರಿತ ಸಂಗೀತ ಬಳಸಲು ಅವಕಾಶವಿಲ್ಲ. ಭಾಷೆಯ ನಿರ್ಬಂಧವಿಲ್ಲ. ನೀಡುವ ಪ್ರದರ್ಶನವು ಯಾವುದೇ ಜಾತಿ, ಧರ್ಮಗಳ ಭಾವನೆಗೆ ಧಕ್ಕೆ ಮಾಡುವಂತಿರ ಬಾರದು.

ವಿಜೇತ ತಂಡಗಳ ಜೊತೆಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೂ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಮೊದಲು ಹೆಸರು ನೊಂದಾಯಿಸಿದ 12 ತಂಡಗಳಿಗೆ ಮಾತ್ರ ಅವಕಾಶ. ತಂಡಗಳ ನೋಂದಾವಣೆಗೆ ಕಡೆಯ ದಿನಾಂಕ ಆ.25 ಕೊನೆಯ ದಿನ
ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ.

ಆದರೆ ಹೆಸರು ನೋಂದಾಯಿಸುವ ಎಲ್ಲ ತಂಡಗಳು ಮುಂಗಡ ರೂ. 2000.00ನ್ನು ಪಾವತಿಸಬೇಕು. ಸ್ಪರ್ಧೆಯ ದಿನದಂದು ಮುಂಗಡ ಹಣವನ್ನು ಹಿಂತಿರುಗಿಸಲಾಗುವುದು. ಮುಂಗಡ ಹಣ ನೀಡದ ತಂಡದ ಪ್ರವೇಶವನ್ನು ಸ್ವೀಕರಿಸಲಾಗುವುದಿಲ್ಲ.

ಪ್ರಥಮ ರೂ 20,000,
ದ್ವಿತೀಯ -ರೂ 12,000, ತೃತೀಯ ರೂ 7000, ಚತುರ್ಥ-ರೂ 5000 ಹಾಗೂ ಫಲಕ ನೀಡಲಾಗುತ್ತದೆ.
ಒಟ್ಟು ಜನಪದ ಪ್ರಸ್ತುತಿ, ವೇಷ ಭೂಷಣ, ಶಿಸ್ತು, ಸಮಯ ಪಾಲನೆ ಎಲ್ಲವನ್ನು ಗಮನಿಸಿ ಅಂಕ ನೀಡ ಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸುಳ್ಯ ಯುವಜನ ಸಂಯುಕ್ತ ಮಂಡಳಿಯನ್ನು ಸಂಪರ್ಕಿಸಬಹುದು.