ಎಸ್ ಎಸ್ ಎಫ್ ಗೋಲ್ಡನ್ ಪಿಪ್ಟಿ ಮಹಾಸಮ್ಮೇಳ ಇದರ ಪ್ರಚಾರರ್ಥ ಸುಳ್ಯಕ್ಕೆ ಎಸ್ ಎಸ್ ಎಫ್ ರಾಜ್ಯಾದ್ಯಕ್ಷರ ಭೇಟಿ

0

ಸೆ.10 ರಂದು ಬೆಂಗಳೂರನಲ್ಲಿ ನಡೆಯಲಿರುವ ಎಸ್ ಎಸ್ ಎಫ್ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಇದರ ಪ್ರಚಾರ್ಥ ಸುಳ್ಯಕ್ಕೆ ಎಸ್ ಎಸ್ ಎಫ್ ರಾಜ್ಯಧ್ಯಕ್ಷ ಅಬೂಸೂಪಿಯಾನ್ ಭೇಟಿ ನೀಡಿದರು.

ಸುಳ್ಯ ಗಾಂಧಿನಗರ, ಅನ್ಸಾರಿಯ ಎಜುಕೇಶನ್ ಸೆಂಟರ್, ದಾರುಲ್ ಹುದಾ ತಂಬಿನಮಕ್ಕಿ,ದಾರುಲ್ ಹಿಕ್ಮ ಬೆಳ್ಳಾರೆ ಮುಂತಾದ ಕಡೆಗಳಿಗೆ ಭೇಟಿ ನೀಡಿ ಎಸ್ ಎಸ್ ಎಫ್ ಮಹಾಸಮ್ಮೇಳನ ಮಾಹಿತಿ ನೀಡಿದರು.

ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಸಪ್ವಾನ್,ಕೋಶಾಧಿಕಾರಿ ಮುಸ್ತಫಾ ಹಿಮಮಿ ನಹಿಮಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹರ್ಲಡ್ಕ ವಿಲ್ಲಾಕ್ಕೆ ಭೇಟಿ ನೀಡಿದರು.

ಹರ್ಲಡ್ಕ ವಿಲ್ಲಾದ ಲತೀಫ್ ಹರ್ಲಡ್ಕ ಎಸ್ ಎಸ್ ರಾಜ್ಯಧ್ಯಕ್ಷ ಅಬೂಸೂಪಿಯಾನ್ ಮತ್ತು ರಾಜ್ಯ ಸಮಿತಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.
ಅನ್ಸಾರಿಯ ಎಜುಕೇಶನ್ ಸೆಂಟರ್ ಮುದರಿಸ್ ಅಬೂಭಕ್ಕರ್ ಹಿಮಮಿ ಸಖಾಫಿ, ಹಮೀದ್ ಹೊಸ್ಮಠ,ಶರೀಫ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.