ಕಲ್ಲುಗುಂಡಿ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರೋತ್ಸವ ಆಚರಣೆ

0

ಕಲ್ಲುಗುಂಡಿ ಮುಯ್ಯದ್ದಿನ್ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಇಂದು ನಡೆಯಿತು. ಜಮಾಅತ್ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಸಂಟಿಯರ್ 77ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಜಮಾಹತ್ ಖತೀಬರಾದ ನಹೀಮ್ ಫೈಝಿ ಉಸ್ತಾದರು ಸ್ವತಂತ್ರಕ್ಕಾಗಿಹೋರಾಟ ನಡೆಸಿ ಮಹನೀಯರನ್ನು ನೆನಸಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ಇತರ ಗಣ್ಯರು.ಸದರ್ ಉಸ್ತಾದ್ ಇಬ್ರಾಹಿಂ ಫೈಝಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎ.ಕೆ ಹಸೈನಾರ್, ಎ.ಕೆ ಇಬ್ರಾಹಿಂ,ಕೆ.ಎಂ ಅಶ್ರಫ್, ಎಚ್.ಎ ಅಶ್ರಫ್,ಕೆ.ಎ ರಝಕ್ ಸೂಪರ್, ಹಾಗೂ ಜಮಾಅತ್ತಿನ ಗಣ್ಯರು ಮತ್ತು ಮದ್ರಸ ಮುಅಲ್ಲಿಮ್‌ಗಳು, ವಿದ್ಯಾರ್ಥಿಗಳು, ಪೋಷಕ ವೃಂದದವರು ಭಾಗವಹಿಸಿದ್ದರು.