ಬೆಳ್ಳಾರೆ ಲಯನ್ಸ್ ಕ್ಲಬ್ ಜಲದುರ್ಗಾ ವತಿಯಿಂದ ನೂತನ ಎಸ್.ಐಯವರಿಗೆ ಸ್ವಾಗತ

0

ಬೆಳ್ಳಾರೆ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿ ಅಧಿಕಾರ ವಹಿಸಿಕೊಂಡಿರುವ ಪಿ.ಎಸ್.ಐ ಸಂತೋಷ್ ಬಿ.ಪಿ ಯವರನ್ನು ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ವತಿಯಿಂದ ಸ್ವಾಗತಿಸಿ ಅಭಿನಂದಿಸಲಾಯಿತು. ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾದ ಲಯನ್ ವಿಠಲ್ ಶೆಟ್ಟಿ ಪೆರ್ವಾಜೆ ಅವರು ಹೂಗುಚ್ಚ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಲ.ದಯಾನಂದ ನಾಯ್ಕ್ ಮಠತಡ್ಕ , ಕೋಶಾಧಿಕಾರಿ ಲಯನ್ ಪದ್ಮನಾಭ ಶೆಟ್ಟಿ ಪೆರುವಾಜೆ ಉಪಸ್ಥಿತರಿದ್ದರು.